ಪಿಲಿಂಗಾಲು: ಮಾ.30, ಶ್ರೀ ಗಾಯತ್ರಿದೇವಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ 50ನೇ ಭಜನಾ ಮಂಗಲೋತ್ಸವ '

Coastal Bulletin
ಪಿಲಿಂಗಾಲು: ಮಾ.30, ಶ್ರೀ ಗಾಯತ್ರಿದೇವಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವ 50ನೇ ಭಜನಾ ಮಂಗಲೋತ್ಸವ '

ಬಂಟ್ವಾಳ: ಪರಶುರಾಮ ಋಷಿ ತಪಸ್ಸು ಮಾಡಿದ ಪುಣ್ಯ ತಪೋಭೂಮಿ ಎಂದೇ ಗುರುತಿಸಿಕೊಂಡ ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಇದೇ 30ರಿಂದ 31ರತನಕ 18ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು 50ನೇ ವರ್ಷದ ಭಜನಾ ಮಂಗಲೋತ್ಸವ ಸಹಿತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಇದೇ 30ರಂದು ಬೆಳಿಗ್ಗೆ ಗಂಟೆ 7.30ಕ್ಕೆ ಗಣಯಾಗ ಸಹಿತ ಶ್ರೀ ಮಹಾಗಣಪತಿ, ಶ್ರೀ ಗುರು ರಾಘವೇಂದ್ರ ಸ್ವಾಮಿ ಹಾಗೂ ಶ್ರೀ ಗಾಯತ್ರಿ ದೇವಿಗೆ ಕಲಶಾಭಿಷೇಕ ಮತ್ತು ಪ್ರಸನ್ನಪೂಜೆ, 11 ಗಂಟೆಗೆ ಶ್ರೀ ನಾಗದೇವರಿಗೆ ಆಶ್ಲೇಷಾ ಬಲಿ, ನಾಗತಂಬಿಲ, ಕಾಲರಕ್ತೇಶ್ವರಿಗೆ ಪರ್ವ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6ಗಂಟೆಗೆ ಭಜನೆ, 9 ಗಂಟೆಗೆ ರಂಗಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಇದೇ 31ರಂದು ಬೆಳಿಗ್ಗೆ ಗಂಟೆ 7.30ಕ್ಕೆ 'ಗಾಯತ್ರಿ

ಯಾಗ', ಗಂಟೆ 10.30ಕ್ಕೆ ರಕ್ತೇಶ್ವರಿ, ಮಹಿಷಂದಾಯ, ಅಣ್ಣಪ್ಪ ಪಂಜುರ್ಲಿ ದೈವಗಳಿಗೆ ಪರ್ವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಗಂಟೆಗೆ ಭಜನೆ ಆರಂಭಗೊಂಡು 8 ಗಂಟೆಗೆ ಭಜನಾ ಮಂಗಲೋತ್ಸವ ಮತ್ತು ರಂಗಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಗಂಟೆ 8.30ಕ್ಕೆ ಹನುಮಗಿರಿ ಮೇಳದಿಂದ 'ವೇದೋದ್ಧರಣ (ಮತ್ಸ್ಯಾವತಾರ) ಶ್ರೀನಿವಾಸ ಕಲ್ಯಾಣ' ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ತಿಳಿಸಿದ್ದಾರೆ.

Leave a Comment