Coastal Bulletin

ಬಂಟ್ವಾಳ: ದೈವಾರಾಧನೆ ಮೂಲಕ ಹಿಂದೂ ಸಮಾಜದ ಕುಟುಂಬಗಳು ಒಗ್ಗಟ್ಟಿನಿಂದ ಇರಲು ಸಾಧ್ಯವಾಗಿದೆ, ಅಂತಹ ದೈವರಾದನೆಯ ಮೂಲ ಕಟ್ಟುಪಾಡುಗಳಿಗೆ ಚ್ಯುತಿ ಬಾರದಂತೆ ದೈವರಾಧನೆ ನಡೆಸಿಕೊಂಡು ಬರುತ್ತಿರುವ ಮಂತ್ರ ದೇವತಾ ಸಾನಿಧ್ಯ ಎಲ್ಲಾ ದೈವ ಆರಾಧನಾ ಕೇಂದ್ರಗಳಿಗೆ ಮಾದರಿಯಾಗಿದೆ ಎಂದು ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಹೇಳಿದ್ದಾರೆ.

ಬಂಟ್ವಾಳ ತಾಲೂಕು ಆಮ್ಟೂರು ಗ್ರಾಮದ ಕಟ್ಟೆಮಾರ್ ಶ್ರೀಮಂತ್ರ ದೇವತಾ ಕ್ಷೇತ್ರ ಸಾನಿಧ್ಯದ ವಾರ್ಷಿಕ  ಕೊಲೋತ್ಸವದ  ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೋಹನ್ ರಾಜ್ ಚೌಟ ಪುಂಚೋಳಿಮಾರು ಗುತ್ತು ವಹಿಸಿದ್ದರು.

ಈ ಸಂದರ್ಭದಲ್ಲಿ ಮಂತ್ರ ದೇವತಾ ಜನಸೇವಾ ಟ್ರಸ್ಟ್ ಹಾಗೂ ಮಂತ್ರ ದೇವತಾ ಕ್ಷೇತ್ರ ಸಾನಿಧ್ಯ ವತಿಯಿಂದ ಅಶಕ್ತರನ್ನು ಗುರುತಿಸಿ ಸಹಾಯಧನ ವಿತರಿಸಲಾಯಿತಲ್ಲಧ ವಿವಿಧ ಕ್ಷೇತ್ರ ಸಾಧಕರನ್ನು ಗುರುತಿಸಿ ಅಭಿನಂದಿಸಲಾಯಿತು.ಹಾಗಯೇ ಮಂತ್ರ ದೇವತೆ ಸಂಬಂಧಪಟ್ಟ ಆಲ್ಬಮ್ ಸಾಂಗ್ ಬಿಡುಗಡೆ ಮಾಡಲಾಯಿತು.

ಉದ್ಯಮಿ ಪಿ ಜಗದೀಶ್ ಕುಮಾರ್ ಮತ್ತು ಸ್ನೇಹ ಜಗದೀಶ್, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಬಂಟ್ವಾಳದ ಎ. ಇ .ಇ . ತಾರನಾಥ ಸಾಲಿಯಾನ್ ಪಿ,ಸಕಲೇಶ್ ಪುರ ಎ.ಪಿ.ಎಂ ಸಿ.ಯ

ಮಾಜಿ ಅಧ್ಯಕ್ಷ ರಂಜೇಶ್, ಚಲನಚಿತ್ರ ನಟಿ ನವ್ಯ ಪೂಜಾರಿ, ವಿಶಾಖ ಶೆಟ್ಟಿ ಮುಂಬೈ, ಶರತ್ ರಾಜ್ ಶೆಟ್ಟಿ ದೇರಳಕಟ್ಟೆ, ವಿಜಯಕುಮಾರ್ ಬೆಳ್ತಂಗಡಿ, ಯಾದವ ಬಾಣಬೆಟ್ಟು, ಉದ್ಯಮಿ ಹರೀಶ್ ಶೆಟ್ಟಿ, ಅಶೋಕ ಕರ್ಕೇರ ಸಜೀಪ, ಯಶವಂತ ಬಂಗೇರ ಕಾಪು, ಪಂಜಿಕಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜೀವ ಪೂಜಾರಿ, ಚೆನ್ನಪ್ಪ ಕೋಟ್ಯಾನ್, ಸುಪ್ರೀತ್ ಶೆಟ್ಟಿ ಬಾಳೆಹೊನ್ನೂರು, ಪಿ.ಸಿ ಜಯರಾಮ್ ಸುಳ್ಯ, ಕಿಶೋರ್ ಕುಮಾರ್ ಕಟ್ಟೆ ಮಾರ್, ಮೊದಲಾದವರು ಉಪಸ್ಥಿತರಿದ್ದರು.

ಮಂತ್ರ ದೇವತಾ ಸಾನಿಧ್ಯದ ಧರ್ಮದರ್ಶಿ ಮನೋಜ್ ಕುಮಾರ್ ಸ್ವಾಗತಿಸಿ, ವಸಂತ ಪೂಜಾರಿ ಬಟ್ಟಹಿತ್ತಿಲು ವಂದಿಸಿದರು, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.

ನಂತರ ಮಾಣಿಲ ಶ್ರೀ ಮೋಹನ್ ದಾಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ಮಂತ್ರ ದೇವತೆಗೆ ವಿಶೇಷವಾಗಿ ದೊಂದಿ ಬೆಳಕಿನಲ್ಲಿ ನರ್ತನಸೇವೆ ಜರಗಿತು,

Leave a Comment