ಬಂಟ್ವಾಳ :ಇಲ್ಲಿನ ತುಂಬೆಯ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಹಾಗೂ ಆಹೋರಾತ್ರಿ ಭಜನಾ ಸಂಕೀರ್ತನ ಕಾರ್ಯಕ್ರಮವು ಮಾ 1ರಂದು ಮಂಗಳವಾರ ನಡೆಯಲಿದೆ.
ಕ್ಷೇತ್ರದಲ್ಲಿ ಮಧ್ಯಾಹ್ನ 12.30ಗೆ ವಿಶೇಷ ಪೂಜೆ ಮತ್ತು ಶಿವ ಜಾಗರಣೆಯ ಪ್ರಯುಕ್ತ ರಾತ್ರಿ 12ಗಂಟೆಗೆ ಮಹಾಪೂಜೆ ನಡೆಯಲಿದೆ.ಅದೇ ರೀತಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ವಿವಿಧ ಭಜನಾ ತಂಡಗಳಿಂದ ಹಾಗೂ ಕ್ಷೇತ್ರದ ಭಕ್ತ
ಸಮೂಹ ದಿಂದ ಹರಿ ನಾಮ ಸಂಕೀರ್ತನೆ ಸೇವೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸೇವಾ ಸಮಿತಿಯ ಕೋಶಾಧಿಕಾರಿ ಉಮೇಶ್ ಕುಮಾರ್ ರೆಂಜೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













