Coastal Bulletin

ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈಯವರು ಭಾನುವಾರ ಜಿಲ್ಲೆಯ ಅತ್ಯಂತ ಕಾರುಣಿಕದ ಕೇತ್ರವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನಕ್ಕೆ ಭೇಟಿ ನೀಡಿ, ತನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ತಾಯಿ ಕಲ್ಲುರ್ಟಿಯು ಕಠಿಣ ಶಿಕ್ಷೆ ನೀಡುವಂತೆ ಪ್ರಾರ್ಥಿಸಿದರು.

ನಾಲ್ಕು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಸಜಿಪ ನಿವಾಸಿ ಶರತ್ ಮಡಿವಾಳ ಎಂಬವರ ಹತ್ಯೆಯಾಗಿದ್ದು,ಈ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಶರತ್ ಮಡಿವಾಳ ಅವರ ತಂದೆಯವರು ಶರತ್ ಹತ್ಯೆಯಲ್ಲಿ ರಮಾನಾಥ ರೈಯವರು ಶಾಮೀಲಾಗಿದ್ದಾರೆ ಎಂದು ನೇರ ಆರೋಪ ಮಾಡಿದ್ದರು.

ಇದರಿಂದಾಗಿ ತನ್ನ ಮನಸ್ಸಿಗೆ ಅಘಾ ತವಾಗಿದ್ದಲ್ಲದೆ ಇದೊಂದು ರಾಜಕೀಯ ಪ್ರೇರಿತ ಸುಳ್ಳು ಆರೋಪ ಮತ್ತು ಪ್ರಕರಣ ವಿಚಾರಣೆ

ನಡೆಯುತ್ತಿರುವ ಹಂತದಲ್ಲಿ ಅದರ ದಿಕ್ಕನ್ನು ತಪ್ಪಿಸುವಂತಾಗಿದೆ.

ಈ ಹಿನ್ನೆಲೆಯಲ್ಲಿ ತಾನು ಪಣೋಲಿಬೈಲು ಕ್ಷೇತ್ರದಲ್ಲಿ ಅಮ್ಮನವರ ಮುಂದೆ ಶರತ್ ಮಡಿವಾಳರ ಹತ್ಯೆಯಲ್ಲಿ ನನ್ನ ಕೈವಾಡ ಇದ್ದರೆ ನನಗೆ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಯಾರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಾರೆ ಅವರಿಗೆ ಕ್ಷೇತ್ರದ ತಾಯಿ ಕಠಿಣ ಶಿಕ್ಷೆ ನೀಡುವಂತೆ ಪ್ರಾರ್ಥಿಸಿ ಕೊಂಡರು. ಈ ಸಂದರ್ಭ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್,ಮಾಜಿ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಮಾಜಿ ಎಪಿಎಂಸಿ‌ಅಧ್ಯಕ್ಷ ಪದ್ಮನಾಭ ರೈ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. 

Leave a Comment