ಪೆರ್ಮಂಕಿ: ಪ್ರೀತಿ ಗೇಮ್ಸ್ ಕ್ಲಬ್ (ರಿ) ಆಶ್ರಯದಲ್ಲಿ 24ನೇ ವರ್ಷದ ಉಚಿತ ಪುಸ್ತಕ ವಿತರಣೆ.

Coastal Bulletin
ಪೆರ್ಮಂಕಿ: ಪ್ರೀತಿ ಗೇಮ್ಸ್ ಕ್ಲಬ್ (ರಿ) ಆಶ್ರಯದಲ್ಲಿ 24ನೇ ವರ್ಷದ ಉಚಿತ ಪುಸ್ತಕ ವಿತರಣೆ.

ಬಂಟ್ವಾಳ :ಪೆರ್ಮಂಕಿ ಪ್ರೀತಿ ಗೇಮ್ಸ್ ಕ್ಲಬ್ (ರಿ). ಇದರ ಆಶ್ರಯದಲ್ಲಿ ಮಾಜಿ ಶಾಸಕರಾದ ದಿವಂಗತ ಎನ್. ಶಿವರಾವ್ ಇವರ ಸ್ಮರಣಾರ್ಥ 24ನೇ ವರ್ಷದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಮೇ 25 ಆದಿತ್ಯವಾರ ಸಂಘದ ಕಚೇರಿಯಲ್ಲಿ ಜರಗಿತು.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಶಾಂತ್ ಸಲ್ದಾನ ಇವರು ವಹಿಸಿದ್ದರು. ಗೌರವ ಅಧ್ಯಕ್ಷರಾದ ಎನ್. ರವಿರಾಜ್ ರಾವ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರುಗಳಾದ ಶ್ರೀಧರ ಪೂಜಾರಿ, ಪದ್ಮನಾಭ ಪೂಜಾರಿ

ಪಟ್ರಕೋಡಿ, ಭಾಸ್ಕರ ಅಮೀನ್ ಭಾಗವಹಿಸಿದರು. ಪೆರ್ಮಂಕಿ ಪರಿಸರದ ಸುಮಾರು 95 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕವನ್ನು ವಿತರಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಸಾಲಿಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Comment