ಬಂಟ್ವಾಳ: ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ, ಸಾಂಸ್ಕೃತಿಕ ಜತೆಗೆ ಸೃಜನಶೀಲತೆಯ ಸ್ಪರ್ಧೆಗಳ ಉತ್ಸವhಆಕೃತಿ 2025 ಇದೇ ಬರುವ ಮಾ27 ರಿಂದ 29ರವರೆಗೆ ಕಾಲೇಜಿನ ಡಾ. ಪಿ. ದಯಾನಂದ ಪೈ ಸತೀಶ್ ಪೈ ಅಡಿಟೋರಿಯಂನಲ್ಲಿ ಜರಗಲಿದೆ.
ಮೂರು ದಿನಗಳ ಅವಧಿಯಲ್ಲಿ 60ಕ್ಕೂ ಅಧಿಕ ರೋಚಕ, ತಾಂತ್ರಿಕ, ಸಾಂಸ್ಕೃತಿಕ ಸಾಹಿತ್ಯಿಕ ಸ್ಪರ್ಧೆ ಗೇಮ್ಸ್, ಕ್ರೀಡಾ ಮೇಳಗಳ ಸಂಗಮವಾಗಿರುವ ಆಕೃತಿ ವಿದ್ಯಾರ್ಥಿ ಸಮೂಹಕ್ಕೆ ಉತ್ಸಾಹ, ಸಂಭ್ರಮವನ್ನು ನೀಡಲಿದೆ. ಹಲವೆಡೆಯ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಹ್ಯಾಕಥಾನ್, ಪ್ರಾಜೆಕ್ಟ್ ಎಕ್ಸಪೋ, ಡ್ಯಾನ್ಸ್ ಬ್ಯಾಟಲ್, ಮ್ಯೂಸಿಕಲ್ ಶೋ, ಅಡ್ರೆನಲಿನ್ ಪಂಪಿಂಗ್ ಸ್ಪೋಟ್ಸ್ ಚಟುವಟಿಕೆಗಳು ಆಕೃತಿಯ ರಂಗೇರಿಸಲಿವೆ.
ಸಂಜೆಗೆ ಮೆರುಗು
ನೀಡುವ ಡಿ.ಜೆ. ನೈಟ್ಸ್, ಮಾ29ರಂದು ಬಾಲಿವುಡ್‌ನ ದಿವ್ಯ ಕುಮಾರ್ ಲೈವ್ ಶೋ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.
ಕಾಲೇಜು ವಾರ್ಷಿಕೋತ್ಸವವದಲ್ಲಿ ಹಾಂಗ್ಯೋ ಐಸ್ ಕ್ರೀಂ ಆಡಳಿತ ನಿರ್ದೇಶಕ ಪ್ರದೀಪ್ ಪೈ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು , ಸಮಾರೋಪ ಸಮಾರಂಭ ನಡೆಯಲಿದೆ. ಆಕೃತಿ 2025 ರ ಮೆರುಗು ತುಂಬಲು ಕಾಲೇಜಿನ ಪರಿಸರ ಅಲೃಂಕೃತವಾಗಿದ್ದು ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.














