ಅಲೆತ್ತೂರು: ಫೆ 28ರಂದು ಮಂಗಳ ಫ್ರೆಂಡ್ಸ್ ಸರ್ಕಲ್ (ರಿ) ಇದರ 44ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ. ಸಾರ್ವಜನಿಕ ಶನೈಶ್ಚರ ಪೂಜೆ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ.

Coastal Bulletin
ಅಲೆತ್ತೂರು: ಫೆ 28ರಂದು ಮಂಗಳ ಫ್ರೆಂಡ್ಸ್ ಸರ್ಕಲ್ (ರಿ) ಇದರ 44ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ. ಸಾರ್ವಜನಿಕ ಶನೈಶ್ಚರ ಪೂಜೆ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮ.

ಬಂಟ್ವಾಳ: ಬಿ.ಸಿ.ರೋಡಿನ ಅಲೆತ್ತೂರಿನಲ್ಲಿ ಮಂಗಳ ಫ್ರೆಂಡ್ಸ್ ಸರ್ಕಲ್ (ರಿ) ಇದರ 27 ನೇ ವರ್ಷದ ಸಾರ್ವಜನಿಕ ಶನೈಶ್ಚರ ಪೂಜೆ ಹಾಗೂ 44 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಫೆ.28ರ ಶನಿವಾರದಂದು ಸಂಭ್ರಮದಿಂದ ನಡೆಯಲಿರುವುದು.

ಅಂದು ಸಂಜೆ ಗಂಟೆ 5.30ರಿಂದ ಶನಿಪೂಜೆ ಪ್ರಾರಂಭ ರಾತ್ರಿ ಗಂಟೆ 7.30ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ ಗಂಟೆ 8.00 ಕ್ಕೆ ಸಭಾ ಕಾರ್ಯಕ್ರಮ ಬಳಿಕ ಸ್ಥಳೀಯ

ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ, ಹಾಗೂ ಸಭಾ ಕಾರ್ಯಕ್ರಮ ರಾತ್ರಿ ಗಂಟೆ 10.00 ರಿಂದ ಅಮ್ಮ ಕಲಾವಿದರು ಕುಡ್ಲ ಇವರಿಂದ ತುಳು ಹಾಸ್ಯಮಯ ನಾಟಕ "ಆನ್ ಮಗೆ" ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Comment