Coastal Bulletin

ಮಂಗಳೂರು : ವೆನ್ಲಾಕ್ ಆಸ್ಪತ್ರೆಯ ವೈದ್ಯ ಬರೋಬ್ಬರಿ 9 ಮಹಿಳಾ ಸಿಬ್ಬಂದಿಗಳ ಜೊತೆ ಸರಸ ಸಲ್ಲಾಪ ಆಟವಾಡಿದ್ದಾನೆ ಎಂದು ತಡವಾಗಿ ಬೆಳಕಿಗೆ ಬಂದಿದೆ.

ಆಸ್ಪತ್ರೆಯ ಕುಷ್ಠರೋಗ ವಿಭಾಗದ ವೈದ್ಯಾಧಿಕಾರಿ, ಆಸ್ಪತ್ರೆಯ 9 ಮಂದಿ ಸಿಬ್ಬಂದಿ ಜೊತೆ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದು, ಮಹಿಳಾ ಸಿಬ್ಬಂದಿಯನ್ನ  ತೊಡೆಮೇಲೆ ಕೂರಿಸಿಕೊಂಡು ಅಸಭ್ಯ ವರ್ತನೆ ತೋರಿದ್ದಾನೆ. ಇದೀಗ ಚೆಲ್ಲಾಟ ಆಡಿದ ವೈದ್ಯಾಧಿಕಾರಿಯ ವಿಡಿಯೋ ಬಹಿರಂಗವಾಗಿದ್ದು,

ಹಾಡಹಗಲೇ ಕಚೇರಿಯಲ್ಲೇ ಈ ಕೃತ್ಯ ವೆಸಗಿದ್ದಾನೆ. ರಂಗಿನಾಟಕ್ಕಾಗಿ ರತ್ನಾಕರನಿಂದ ಸರ್ಕಾರಿ ಕಚೇರಿ ದುರ್ಬಳಕೆ ಮಾಡಿಕೊಂಡಿದ್ದು ತಪ್ಪಿತಸ್ಥನನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಆದರೆ ಅನುಚಿತವಾಗಿ ವರ್ತಿಸಿರುವ ಮಹಿಳಾ ಸಿಬಂದಿಗಳು ವೆನ್ಲಾಕ್ ಆಸ್ಪತ್ರೆಗೆ ಸಂಬಂಧಪಟ್ಟಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

Leave a Comment