ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಗುಸ್ನೇಹಿ ಮನಸ್ಸು ಮಕ್ಕಳ ಮಾಸೋತ್ಸವ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ತಜ್ಞ ಡಾ.ರವೀಶ್ ತುಂಗ ಇವರನ್ನು ಸನ್ಮಾನಿಸಲಾಯಿತು.
ಹದಿಹರೆಯದ ಮಕ್ಕಳ ಮನಸ್ಸು ನಿಯಂತ್ರಣ ದೊಡ್ಡ ಸವಾಲಾಗಿದ್ದು, ಮನಸ್ಸು ಮತ್ತು ದೇಹದ ಬೆಳವಣಿಗೆ ಬಗ್ಗೆ ಅವರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಮಾನಸಿಕ ಆರೋಗ್ಯ ತಜ್ಞ ಡಾ.ರವೀಶ್ ತುಂಗ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಏರ್ಪಡಿಸಿದ್ದ ಮಗುಸ್ನೇಹಿ ಮನಸ್ಸು ಮಕ್ಕಳ ಮಾಸೋತ್ಸವ ಕಾರ್ಯಕ್ರಮದಲ್ಲಿ ಅವರು
ಮಾಹಿತಿ ನಿಡಿದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ವಸಂತ ಬಾಳಿಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ವೆಲೊರೆಡ್ ಅಧ್ಯಕ್ಷ ರೆನ್ನಿ ಡಿಸೋಜ, ಪ್ರಮುಖರಾದ ಶ್ರೀನಿವಾಸ ಪೂಜಾರಿ, ದಾಮೋದರ ಬಿ.ಎಂ., ದೀಕ್ಷಿತ್, ಮಂಜು ವಿಟ್ಲ, ಸುಜಾತ ಕುಮಾರಿ, ಭುವಿಕಾ ಇದ್ದರು.














