ಬಂಟ್ವಾಳ :ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾರ್ಗದರ್ಶನದಲ್ಲಿ ,ಗ್ರಾಮವಿಕಾಸ ಪ್ರತಿಷ್ಠಾನ ನೆತ್ತರಕೆರೆ, ಇದರ ಆಶ್ರಯದಲ್ಲಿ ನಡೆಯುತ್ತಿರುವ ಸಮೃದ್ಧಿ ದೀನಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಾರ್ಷಿಕ ಮಹಾಸಭೆಯು ಸೆ 25ರಂದು ಭಾನುವಾರ ನೆತ್ತರಕೆರೆ ವಿಠಲ ಶೆಟ್ಟಿ ಸಭಾಭವನದಲ್ಲಿ ಜರುಗಿತು.
ಶ್ರೀ ಭಗವತಿ ಕ್ಷೇತ್ರ ಕುದ್ರೋಳಿಯ ಬೀರನ್ನಾತರ್ ಶ್ರೀ ಸುಧಾಕರ್ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ವಿದ್ಯೋದಯ ಸ್ವಸಹಾಯ ಸಂಘಗಳ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಜಯರಾಮ ಶೆಟ್ಟಿ ಅಬ್ಬೆಟ್ಟು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸ್ವಸಹಾಯ ಸಂಘಗಳು ಸಮಾಜದ ಅಭಿವೃದ್ಧಿಗೆ ತುಂಬಾ ಸಹಕಾರಿ ಎಂದು ವಿವರಿಸಿದರು. ಒಕ್ಕೂಟದ ಅಧ್ಯಕ್ಷ ದಾಮೋದರ ನೆತ್ತರಕೆರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಇಂದಿನ ದಿನಗಳಲ್ಲಿ ಬದಲಾಗುತ್ತಿರುವ
ಸಂಸ್ಕೃತಿ ಪರಂಪರೆಗಳನ್ನು ಉಳಿಸಲು ಸ್ವಸಹಾಯ ಸಂಘಗಳನ್ನು ಸಹಕಾರಿಯಾಗಿದೆ ಎಂದರು.
ನವೋದಯ ಮಿತ್ರ ಕಲಾ ವೃಂದದ ಗೌರವಾಧ್ಯಕ್ಷರಾದ ಪಿ ಸುಬ್ರಹ್ಮಣ್ಯ ರಾವ್, ಅಧ್ಯಕ್ಷ ಸಂತೋಷ್ ಕುಮಾರ್, ಒಕ್ಕೂಟದ ಕಾರ್ಯದರ್ಶಿ ಶ್ರೀಧರ್, ಕೋಶಾಧಿಕಾರಿ ಚಂದ್ರಶೇಖರ, ವೇದಿಕೆಯಲ್ಲಿ ಉಪಸ್ಥಿತರಿದ್ದರು. 10 ಸ್ವಸಹಾಯ ಸಂಘಗಳಿಂದ ಒಟ್ಟು 87 ಸದಸ್ಯರು ಭಾಗವಹಿಸಿದ್ದರು. ತಂಡಗಳಿಗೆ ಹಾಡು ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.














