ತುಂಬೆ ಕಡೆಗೋಳಿ ತಿರುವಿನಲ್ಲಿ ರೋಡೇ ಇಲ್ಲ ನೀರೇ ಎಲ್ಲಾ.... ಸಂಬಂಧಪಟ್ಟವರು ಸ್ಪಂದಿಸುವರೇ...

Coastal Bulletin
ತುಂಬೆ ಕಡೆಗೋಳಿ ತಿರುವಿನಲ್ಲಿ ರೋಡೇ ಇಲ್ಲ ನೀರೇ ಎಲ್ಲಾ.... ಸಂಬಂಧಪಟ್ಟವರು ಸ್ಪಂದಿಸುವರೇ...

ಬಂಟ್ವಾಳ :ಬಿ ಸಿ ರೋಡ್ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದ ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಅನೇಕ ಅವಘಡಗಳು ನಡೆಯುತ್ತಲೇ ಇವೆ. ಇದೀಗ ತುಂಬೆ ಪದವಿ ಪೂರ್ವ ಕಾಲೇಜ್ ಬಲಿಯಿಂದ ಕಡೆಗೋಳಿ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದ ನೀರಿಗೆ ರೋಡ್ ಕಾಣದೆ ವಾಹನ ಸವಾರರು ಪರದಾಡುವ ಸ್ಥಿತಿ ಬಂದಿದೆ,

ಸರಿಯಾದ ಚರಂಡಿಗೆ ವ್ಯವಸ್ಥೆ ಇಲ್ಲದೆ ಮಳೆಯ ನೀರು ರೋಡಿನಲ್ಲಿ ಹರಿದು ಲಘು ವಾಹನಗಳಿಗೆ ಗಂಭೀರ ಸಮಸ್ಯೆಯಾಗಿ ಅಪಘಾತ ಸಂಭವಿಸುವ ಸಂಭವ ಅಧಿಕವಾಗಿದೆ, ಪಾದಚಾರಿಗಳಿಗೂ ಪಕ್ಕದ ಶಾಲಾ

ಮಕ್ಕಳಿಗೂ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ, ಹೆದ್ದಾರಿ ಪ್ರಾಧಿಕಾರ ಅಥವಾ ಸಂಬಂಧಪಟ್ಟ ಇಲಾಖೆ ತಕ್ಷಣ ಸ್ಪಂದಿಸಿ ಮುಂದೆ ನಡೆಯುವ ಅವಘಡಗಳಿಂದ ಮುಕ್ತಿ ನೀಡಬೇಕೆಂದು ಸಾವಜನಿಕರು ಒತ್ತಾಯಿಸಿದ್ದಾರೆ.

Leave a Comment