ತುಂಬೆ :ಶ್ರೀ ಶಾರದಾ ಸಭಾ ಭವನದ ವಿಸ್ತ್ರತ ಕಟ್ಟಡ ನಿರ್ಮಾಣದ ವಿಜ್ಞಾಪಣಾ ಪತ್ರ ಬಿಡುಗಡೆ.

Coastal Bulletin
ತುಂಬೆ :ಶ್ರೀ ಶಾರದಾ ಸಭಾ ಭವನದ ವಿಸ್ತ್ರತ ಕಟ್ಟಡ ನಿರ್ಮಾಣದ ವಿಜ್ಞಾಪಣಾ ಪತ್ರ ಬಿಡುಗಡೆ.

ಬಂಟ್ವಾಳ : ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ. ತುಂಬೆ ಹಾಗೂ ಶ್ರೀ ಶಾರದಾ ರಜತ ಮಹೋತ್ಸವ ಸಮಿತಿ ಇದರ ಆಶ್ರಯದಲ್ಲಿ ಶ್ರೀ ಶಾರದಾ ಸಭಾ ಭವನದ ವಿಸ್ತ್ರತ ಕಟ್ಟಡ ನಿರ್ಮಾಣ ಪ್ರಯುಕ್ತ ವಿಜ್ಞಾಪಣಾ ಪತ್ರ ಬಿಡುಗಡೆ ಕಾರ್ಯಕ್ರಮವು ಮೇ 25ರಂದು ಆದಿತ್ಯವಾರ ತುಂಬೆ ಶಾರದಾ ಸಭಾ ಭವನದಲ್ಲಿ ನಡೆಯಿತು.

ರಜತ ಮಹೋತ್ಸವದ ಅಂಗವಾಗಿ ಶಾರದಾ ಸಭಾ ಭವನದ ವಿಸ್ತ್ರತ ಕಟ್ಟಡದ ನಿರ್ಮಾಣ ಕಾರ್ಯ ಈಗಾಗಲೇ ಭರದಿಂದ ಸಾಗುತ್ತಿದ್ದು, ಸಭಾ ಭವನ ಕಟ್ಟಡ ನಿರ್ಮಾಣದ ಕುರಿತ ವಿಜ್ಞಾಪಣಾ ಪತ್ರವನ್ನು ಉದ್ಯಮಿಗಳಾದ ಅಜಿತ್ ಚೌಟ ದೇವಸ್ಯ, ನೈಜೀರಿಯಾ ಮತ್ತು ಭುವನೇಶ್ ಪಚ್ಚಿನಡ್ಕ ಇವರು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಉಮೇಶ್ ಸಾಲಿಯಾನ್ ಬೆಂಜನಪದವು,ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ತುಂಬೆ ಇದರ ಅಧ್ಯಕ್ಷರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಜ್ಯೋತಿಷಿ ಅನಿಲ್ ಪಂಡಿತ್, ಶಾರದಾ ಮಹೋತ್ಸವದ ಪ್ರಧಾನ ಅರ್ಚಕರಾದ ಗಿರಿ ಪ್ರಕಾಶ್ ತಂತ್ರಿ, ಸಾಮಾಜಿಕ ಮುಂದಾಳು ಪ್ರಕಾಶ್ ಚಂದ್ರ ರೈ ದೇವಸ್ಯ, ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಭಜರಂಗದಳ ಜಿಲ್ಲಾ ಸಂಚಾಲಕ

ಭರತ್ ಕುಮ್ಡೆಲ್, ಜಗದೀಶ್ ಪೂಜಾರಿ ಕುಮ್ಡೆಲ್, ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬಿ ತುಂಬೆ, ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್ ತುಂಬೆ, ಶ್ರೀ ಶಾರದಾ ರಜತ ಮಹೋತ್ಸವದ ಅಧ್ಯಕ್ಷರಾದ ರಾಘವ ಬಂಗೇರ, ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೋಟ್ಯಾನ್ ಕಡೆಗೊಳಿ, ಕೋಶಾಧಿಕಾರಿ ವಿನೋದ್ ಬೊಳ್ಳಾರಿ, ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್ ಕಜೆಕಂಡ, ಜಗದೀಶ್ ಕಡೆಗೊಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾರದಾ ರಜತ ಮಹೋತ್ಸವ ಸಮಿತಿಯ ಸಂಚಾಲಕರಾದ ತೇವು ತಾರಾನಾಥ್ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿ,ಪ್ರ.ಕಾರ್ಯದರ್ಶಿ ಪ್ರವೀಣ್ ಬಿ ತುಂಬೆ ಸ್ವಾಗತಿಸಿದರು. ವೈಷ್ಣವಿ ಬೊಳ್ಳಾರಿ ಪ್ರಾರ್ಥಿಸಿ, ಸುಶಾನ್ ಬೊಳ್ಳಾರಿ ವಂದಿಸಿ, ಸಂತೋಷ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Leave a Comment