ಬಂಟ್ವಾಳ: ಇಲ್ಲಿನ ಕಾಮಾಜೆ ಸಮೀಪದ ದೈಪಲ ಶಿವಾಜಿನಗರ ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ಮತ್ತು ಶ್ರೀ ರಾಮಾಂಜನೇಯ ವ್ಯಾಯಮ ಶಾಲೆ ವತಿಯಿಂದ ಶ್ರೀರಾಮ ನವಮಿ ಪ್ರಯುಕ್ತ 15ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು 'ಶ್ರೀರಾಮ ತಾರಕ ಯಾಗ' ಕಾರ್ಯಕ್ರಮ ಮಾ.27ರಂದು ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೇಶವ ದೈಪಲ ಹೇಳಿದ್ದಾರೆ.
ದೈಪಲ ಶ್ರೀರಾಮ ಭಜನಾ ಮಂದಿರದಲ್ಲಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ' ಪುರೋಹಿತ ರಾಜಗೋಪಾಲಾಚಾರ್ಯ ಇವರ ನೇತೃತ್ವದಲ್ಲಿ ಒಂದು ಲಕ್ಷ ಶ್ರೀರಾಮ ತಾರಕ ಜಪ ನಡೆಯಲಿದೆ' ಎಂದರು.
ಅಂದು ರಾತ್ರಿ 8 ಗಂಟೆಗೆ ಸ್ಥಳದಾನಿ ಎ.ನೇಮಿರಾಜ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಗೋಸುರಭಿ ಭಕ್ತಿಭೂಷಣ ಗುರೂಜಿ ಸಹಿತ ಆರ್ ಎಸ್ ಎಸ್ ಮುಖಂಡ ಡಾ.ಕೆ. ಪ್ರಭಾಕರ ಭಟ್ ಕಲ್ಲಡ್ಕ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಮತ್ತಿತರ ಗಣ್ಯರು ಭಾಗವಹಿಸುವರು.
ರಾತ್ರಿ ಗಂಟೆ 9.30ಕ್ಕೆ ಭಕ್ತಿ ಪ್ರದಾನ 'ಜೋಡು ಜೀಟಿಗೆ' ನಾಟಕ ಪ್ರದರ್ಸನಗೊಳ್ಳಲಿದೆ ಎಂದು ಹೇಳಿದರು. ಕಳೆದ 15 ವರ್ಷಗಳಲ್ಲಿ 18 ದಿನ ನಗರ ಭಜನೆ ಸಹಿತ ವಿವಿಧ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಮಂದಿರ ಜೀರ್ಣೋದ್ದಾರ ಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಚಂದಪ್ಪ ಮೇಸ್ತ್ರಿ ರಾಜೀವಪಲ್ಕೆ, ಹರೀಶ್ ದೈಪಲ, ನಾರಾಯಣ ಮಾಸ್ಟರ್, ವಾಣಿ ಕೇಶವ ದೈಪಲ, ಅಶೋಕ್ ಕಾಮಾಜೆ, ವಿಜಯಲಕ್ಷ್ಮಿ, ಜಯಂತಿ ಕಾಮಾಜೆ, ಗೀತಾ ರಾಮಚಂದ್ರ, ಉಮಾವತಿ, ಸುರೇಖ ಮತ್ತಿತರರು ಇದ್ದರು.















