Coastal Bulletin

ಸಂಪಾಜೆ: ಕೊಡಗು ಸಂಪಾಜೆಯ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಕೋಟಿ ಮೂಲ್ಯ ಅವರು ನ.23 ರಂದು ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಇವರು ಸಂಪಾಜೆ, ವಿರಾಜಪೇಟೆ, ಮಡಿಕೇರಿಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದರು. ಎಸ್ ಐ ಹುದ್ದೆಗೆ ಏರುವ ಮೊದಲು ಅವರು ಗೃಹ ಮತ್ತು ಅರಣ್ಯ ಇಲಾಖೆಯಲ್ಲಿ

ಕರ್ತವ್ಯ ನಿರ್ವಹಿಸಿದ್ದಾರೆ. 

ಪ್ರಾಥಮಿಕ  ಹಾಗೂ ಪ್ರೌಢ ಶಿಕ್ಷಣವನ್ನು ಸಂಪಾಜೆಯಲ್ಲಿ ಪೂರ್ಣಗೊಳಿಸಿದ್ದರು. ಅವರು ಪತ್ನಿ, ಮಗ ಸೊಸೆ, ಅಣ್ಣ, ತಂಗಿಯಂದಿರು, ಕುಟುಂಬ ವರ್ಗ  ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Comment