ಬಂಟ್ವಾಳ: ಇಲ್ಲಿನ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರ ಒಡ್ಡೂರು ಫಾಮ್ಸ್ರ್ ಇಲ್ಲಿ ರೂ 3 ಕೋಟಿ ವೆಚ್ಚದಲ್ಲಿ ನಿಮಾಣಗೊಂಡ ಹಸಿ ತ್ಯಾಜ್ಯದಿಂದ ಬಹೂಪಯೋಗಿ 'ಒಡ್ಡೂರು ಎನರ್ಜಿ ' ಸಿ ಎನ್ ಜಿ ಉತ್ಪಾದನಾ ಘಟಕ ಲೋಕಾರ್ಪಣೆ ಇದೇ 25ರಂದು ಸಂಜೆ 4 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಕೇಂದ್ರ ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬ 'ಒಡ್ಡೂರು ಎನರ್ಜಿ ' ಸಿ ಎನ್ ಜಿ ಉತ್ಪಾದನಾ ಘಟಕ ಲೋಕಾರ್ಪಣೆಗೊಳಿಸಲಿದ್ದು, ಸಂಸದ ನಳಿನ್
ಕುಮಾರ್ ಕಟೀಲು ಮತ್ತು ಸ್ಥಳೀಯ ಶಾಸಕ ವೈ.ಭರತ್ ಶೆಟ್ಟಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಶಾಸಕ ರಾಜೇಶ ನಾಯ್ಕ್ ಕಚೇರಿ ಪ್ರಕಟಣೆ ತಿಳಿಸಿದೆ.















