ನೆತ್ತರಕೆರೆ :ಎನ್ ಎಂ ಸಿ ಪ್ರಿಮಿಯರ್ ಲೀಗ್-2025 ಕ್ರಿಕೆಟ್ ಪಂದ್ಯಾಟಕ್ಕೆ ಅದ್ದೂರಿ ಚಾಲನೆ. ಎನ್ ಎಂ ಸಿ ಟೈಗರ್ಸ್ ಪ್ರಥಮ ಹಾಗೂ ಎನ್ ಎಂ ಸಿ ವಾರಿಯರ್ಸ್ ತಂಡಕ್ಕೆ ದ್ವಿತೀಯ ಪ್ರಶಸ್ತಿ.

Coastal Bulletin
ನೆತ್ತರಕೆರೆ :ಎನ್ ಎಂ ಸಿ ಪ್ರಿಮಿಯರ್ ಲೀಗ್-2025 ಕ್ರಿಕೆಟ್ ಪಂದ್ಯಾಟಕ್ಕೆ ಅದ್ದೂರಿ ಚಾಲನೆ. ಎನ್ ಎಂ ಸಿ ಟೈಗರ್ಸ್ ಪ್ರಥಮ ಹಾಗೂ ಎನ್ ಎಂ ಸಿ ವಾರಿಯರ್ಸ್ ತಂಡಕ್ಕೆ ದ್ವಿತೀಯ ಪ್ರಶಸ್ತಿ.

ಬಂಟ್ವಾಳ :ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನವೋದಯ ಮಿತ್ರ ಕಲಾ ವೃಂದ (ರಿ) ನೆತ್ತರಕೆರೆ ಇದರ ಆಶ್ರಯದಲ್ಲಿ 3ನೇ ವರ್ಷದ ಸಂಘದ ಸದಸ್ಯರ ಕೂಡುವಿಕೆಯ "ಎನ್ ಎಂ ಸಿ ಪ್ರಿಮಿಯರ್ ಲೀಗ್-2025" ಕ್ರಿಕೆಟ್ ಪಂದ್ಯಾಟವು ಮಾ 23ರಂದು ಆದಿತ್ಯವಾರ ನೆತ್ತರಕೆರೆ ಲಚ್ಚಿಲ್ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.

ಭಾರತ ಮಾತೆಗೆ ದೀಪ ಬೆಳಗಿಸಿ ಪುಷ್ಪರ್ಚಾನೆಗೈದು ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು,ಉದ್ಘಾಟನಾ ಕಾರ್ಯಕ್ರಮದಲ್ಲಿ ನವೋದಯ ಮಿತ್ರ ಕಲಾ ವೃಂದದ ಸಂಚಾಲಕ ದಾಮೋದರ ನೆತ್ತರಕೆರೆ ಮಾತನಾಡಿ ಕ್ರೀಡೆಯ ಮೂಲಕ ಸಂಘಟನೆಯನ್ನು ಬಲಪಡಿಸಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಡು ಸಮಾಜದ ಅಭಿವೃದ್ಧಿಗೆ ಕೈ ಜೋಡಿಸೋಣ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ನವೋದಯ ಮಿತ್ರ ಕಲಾ ವೃಂದದ ಗೌರವಧ್ಯಕ್ಷ ಪಿ ಸುಬ್ರಮಣ್ಯ ರಾವ್, ಮಾಜಿ ಅಧ್ಯಕ್ಷ ಸುರೇಶ ಭಂಡಾರಿ ಅರ್ಬಿ, ಅಧ್ಯಕ್ಷ ಸಂತೋಷ ಕುಮಾರ್, ನವೋದಯ

ಭಜನಾ ಮಂಡಳಿಯ ಮುಖ್ಯಸ್ಥ ವಿಶ್ವನಾಥ ಕುಲಾಲ್, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಯು ಜಿ, ಶನಿ ಪೂಜಾ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ಹೊನ್ನಪ್ಪ ಸುವರ್ಣ, ನೇತ್ರಾವತಿ ಮಾತೃ ಮಂಡಳಿಯ ಅಧ್ಯಕ್ಷೆ ಮಾಲತಿ ಚಂದ್ರಹಾಸ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಿಲೀಪ್ ತುಂಬೆ ಸಹಕರಿಸಿದರು.

ಎನ್ ಎಂ ಸಿ ಟೈಗರ್ಸ್ ತಂಡವು ಪ್ರಥಮ ಹಾಗೂ ಎನ್ ಎಂ ಸಿ ವಾರಿಯರ್ಸ್ ತಂಡವು ದ್ವಿತೀಯ ಪ್ರಶಸ್ತಿಯನ್ನು ಗೆದ್ದು ಕೊಂಡಿತು.

Leave a Comment