ಬಂಟ್ವಾಳ:ದೇಶದಲ್ಲಿ ಸಮಾಜಮುಖಿ ಚಿಂತನೆ ಹೊಂದಿರುವ ವಿವಿಧ ಸಂಘಟನೆಗಳು ಮತ್ತು ಆಡಂಬರಕ್ಕಾಗಿ ಅನಗತ್ಯ ಹಣ ಪೋಲು ಮಾಡುವ ಉದ್ಯಮಿಗಳು ಒಟ್ಟುಗೂಡಿ ವಸತಿ ರಹಿತ ಬಡ ಕುಟುಂಬಗಳಿಗೆ ಉಚಿತ ಮನೆ ಮತ್ತು ಶಿಕ್ಷಣದ ಜೊತೆಗೆ ಆರೋಗ್ಯ ಸೇವೆ ನೀಡಿದಾಗ ನಿಜವಾದ 'ರಾಮರಾಜ್ಯ' ನಿರ್ಮಾಣ ಸಾಧ್ಯವಾಗುತ್ತದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಬಡಗಬೆಳ್ಳೂರು ಗ್ರಾಮದ ಕಾಗುಡ್ಡೆ ಎಂಬಲ್ಲಿ ಕಮ್ಮಾಜೆ ನಾಗಶ್ರೀ ಮಿತ್ರವೃಂದದ ವತಿಯಿಂದ ಬಡ ಕುಟುಂಬದ ಪ್ರೇಮಾ ಎಂಬವರಿಗೆ ರೂ 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಉಚಿತ ಮನೆ ಭಾನುವಾರ ಸಂಜೆ ಹಸ್ತಾಂತರಿಸಿ ಅವರು ಆಶೀರ್ವಚನ ನೀಡಿದರು.
ಕಮ್ಮಾಜೆ ನಾಗಶ್ರೀ ಮಿತ್ರ ವೃಂದ ಅಧ್ಯಕ್ಷ ಪುಷ್ಪರಾಜ್ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು. ನಾಗಶ್ರೀ ಮಾತೃ ವೃಂದ ಅಧ್ಯಕ್ಷೆ ಸಂಧ್ಯಾ, ಪ್ರಮುಖರಾದ ಶಶಿಧರ ಪೊಯ್ಯೆ, ಜೀವನ್ ಮಡಿಕೇರಿ, ಸವಿಜ್ ಪೊಳಲಿ, ತಿರುಮಲೇಶ್ ಬೆಳ್ಳೂರು, ಯೋಗೀಶ್ ತುಂಬೆ, ತಿಮ್ಮಪ್ಪ ಕಮ್ಮಾಜೆ ಮತ್ತಿತರರು ಇದ್ದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭೇಟಿ ನೀಡಿದರು.
ಜಗದೀಶ ಕಡೆಗೋಳಿ ಸ್ವಾಗತಿಸಿ, ತಿರುಲೇಶ್ ಬೆಳ್ಳೂರು ವಂದಿಸಿದರು.









