Coastal Bulletin

ಬಂಟ್ವಾಳ :ಇಂದುಲಕ್ಷ್ಮಿ ಸಮೂಹ ಸಂಸ್ಥೆಯ, ಲಕ್ಷ್ಮಿ ನಾರಾಯಣ ಉಚಿತ ಯೋಗ ಕೇಂದ್ರ, ಇಂದಿರಾ ಕೆ ಶೆಟ್ಟಿ ಉಚಿತ ಶಿಕ್ಷಣ ಮತ್ತು ಅರೋಗ್ಯ ವೇದಿಕೆ ಹಾಗೂ ಇಂದುಲಕ್ಷ್ಮಿ ಇನ್ವೆಸ್ಟ್ಮೆಂಟ್ ಫ್ರೀ ಕನ್ಸಲ್ ಟೆನ್ಸಿ ಸರ್ವಿಸ್ ಮೂರು ಕೇಂದ್ರಗಳ ಉದ್ಘಾಟನಾ ಸಮಾರಂಭವು ಬಂಟ್ವಾಳ ತಾಲೂಕಿನ ಅಬ್ಬೆಟ್ಟು ಮೇರಮಜಲು ಗ್ರಾಮದಲ್ಲಿ ಇತ್ತೀಚೆಗೆ ನಡೆಯಿತು.

ಕೇಂದ್ರ ಸಂಸ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಬಿ. ಕಮಲಾಕ್ಷ ಶೆಟ್ಟಿ ಯವರು . ಯೋಗ ಪ್ರಾಣಾಯಾಮ, ಧ್ಯಾನ ಆಹಾರ ಪದ್ಧತಿ ಕ್ರೀಡೆ ಸಂಪಾದನೆ ಹಾಗೂ ಸನಾತನ ಧರ್ಮದ ಬಗ್ಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಜಾಗೃತಿಯನ್ನು ಮೂಡಿಸುವುದೇ ಈ ಸಂಸ್ಥೆಯ ಮೂಲ ಉದ್ಧೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರು ಜಿಲ್ಲಾ ಆರ್ ಎಸ್ ಎಸ್ ಸಂಘ ಚಾಲಕರಾದ ಕೊಡ್ಮಾಣ್

ಕಾಂತಪ್ಪ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೇರಮಜಲು ಗ್ರಾ ಪಂ. ಅಧ್ಯಕ್ಷರಾದ ಜಯಶ್ರೀ ಕರ್ಕೇರ, ಮೇರಮಜಲುಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಂಗಾಧರ್ ಪೂಜಾರಿ, ಬಿಜೆಪಿ ಅಬ್ಬೆಟ್ಟು ಬೂತ್ ಅಧ್ಯಕ್ಷರಾದ ಜಯರಾಮ್ ಶೆಟ್ಟಿ, ವಿಜಯ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಪ್ರದೀಪ್ ನಾಯಕ್ ಹಾಗೂ ಮೇರಮಜಲಿನ ಪ್ರಗತಿಪಾರ ಕೃಷಿಕರಾದ ನಾಗಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Leave a Comment