Coastal Bulletin

ಬಂಟ್ವಾಳ :ಕೃಷಿ ಇಲಾಖೆ ಬಂಟ್ಟಾಳ ತಾಲೂಕು ವತಿಯಿಂದ ತುಂಬೆ ಗ್ರಾಮದ ಹಿರಿಯ ಕೃಷಿಕ ಮೋನಪ್ಪ ಬೆಳ್ಚಾಡರ ಮನೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಕೃಷಿ ಮಾಹಿತಿ ಕಾರ್ಯಗಾರ ಸೆ.23ರಂದು ಶುಕ್ರವಾರ ಹಮ್ಮಿ ಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ತುಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರವೀಣ್ ಬಿ ತುಂಬೆ ಇವರು ಕೃಷಿ ಹಾಗೂ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ನೀಡಿ ಅದರ ಸದುಪಯೋಗ

ಪಡೆಯುವಂತೆ ಕೃಷಿಕರಿಗೆ ತಿಳಿಸಿದ್ದರು.

 ಮೋನಪ್ಪ ಬೆಳ್ಚಾಡ ,ನಿವೃತ ಕೃಷಿ ಅಧಿಕಾರಿ ಕೊರಗಪ್ಪ ಸಹಾಯಕ ತೋಟಗಾರಿಕೆ ಅಧಿಕಾರಿ ಹರೀಶ್ ,ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಹನುಮಂತ,ಪ್ರಗತಿ ಪರ ರೈತ ಪದ್ಮಾನಾಭ ಹಾಗೂ ಗ್ರಾಮದ ರೈತರು ಭಾಗವಹಿಸಿದ್ದರು.

Leave a Comment