Coastal Bulletin

ಮಂಗಳೂರು : ದಸರಾ ರಜೆ ಮೂರನೇ ಬಾರಿಗೆ ಪರಿಷ್ಕರಣೆಗೊಂಡಿದೆ. ನಿನ್ನೆಯಷ್ಟೇ ಮಂಗಳೂರು ಮಾತ್ರ ಇದ್ದ ರಜೆ , ಇವತ್ತು ಇಡೀ ಜಿಲ್ಲೆಗೆ ಅನ್ವಯಿಸುವಂತೆ ಸೆ.28 ರಿಂದಲೇ ದಸರಾ ರಜೆಯನ್ನು ನಿಗದಿಪಡಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಇಂದು ಆದೇಶ ಹೊರಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸೆ.24 ರಿಂದ ದಕ್ಷಿಣ ಕನ್ನಡ ಜಿಲ್ಲೆಗೆ ರಜೆ ನೀಡುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ವಿವೇಚನಾಧಿಕಾರ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಟಿಪ್ಪಣಿ ಬರೆದಿದ್ದರು.

ನಿನ್ನೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ‌ ಮಂಗಳೂರು ತಾಲೂಕಿಗೆ ಮಾತ್ರ ಸೆ.28 ರಿಂದ ರಜೆ ಎಂದು

ಆದೇಶ ಹೊರಡಿಸಲಾಗಿತ್ತು. ಆದರೆ ಈ ಗೊಂದಲದಿಂದಾಗಿ ಇಡೀ ಜಿಲ್ಲೆಗೆ ಆದೇಶ ವಿಸ್ತರಣೆ ಮಾಡಬೇಕೆಂದು ಒತ್ತಾಯ ವ್ಯಕ್ತವಾದ ಕಾರಣ ಇಂದು ದ.ಕ.ಡಿಸಿ ಇಡೀ ಜಿಲ್ಲೆಗೆ ರಜೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಇತರ ಜಿಲ್ಲೆಗಳಲ್ಲಿ ಅ.3 ರಿಂದ ದಸರಾ ರಜೆ ಆರಂಭವಾಗುತ್ತದೆ. ದಕ್ಷಿಣ ಕನ್ನಡ ಕ್ಕೆ ಮಾತ್ರ ನಾಲ್ಕು ದಿನ ಹೆಚ್ಚುವರಿ ರಜೆ ನೀಡಲಾಗಿದೆ.

Leave a Comment