Coastal Bulletin

ಬಂಟ್ವಾಳ: ಕರ್ನಾಟಕ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಬಂಟ್ವಾಳ ವಲಯದ ಕರ್ನಾಟಕ ಸುಸ್ಥಿರ ಅರಣ್ಯ ನಿರ್ವಹಣೆ ಮತ್ತು ಜೀವ ವೈವಿಧ್ಯ ಸಂರಕ್ಷಣಾ ಯೋಜನೆಯಲ್ಲಿ ಸ್ಥಾಪಿಸಲಾದ ವೀರಕಂಭ ಗ್ರಾಮ ಅರಣ್ಯ ಸಮಿತಿ'ಯ 2021-22ನೇ ಸಾಲಿನ ವಾರ್ಷಿಕ ಮಹಾಸಭೆ'ಯು ಸೆ.20 ರಂದು ಕೆಲಿಂಜದ ಸಾಮಾಜಿಕ ಅರಣ್ಯ ವಲಯ ಕಛೇರಿಯ ಮಹಡಿಯಲ್ಲಿ ನಡೆಯಿತು.

ವೀರಕಂಭ ಗ್ರಾಮ ಅರಣ್ಯ ಸಮಿತಿಯ  ಅಧ್ಯಕ್ಷ ವಿಶ್ವನಾಥ ಎಂ. ಅಧ್ಯಕ್ಷತೆ ವಹಿಸಿದ್ದರು. ವೀರಕಂಭ ಗ್ರಾ.ಪಂ.ಅಧ್ಯಕ್ಷ  ದಿನೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಬಿತ್ತೋತ್ಸವದಲ್ಲಿ ಬೀಜ ಸಂಗ್ರಹಿಸುವ ಸ್ಪರ್ಧೆಯಲ್ಲಿ ವಿಜೇತರಾದ ಮಜಿ ಹಾಗೂ ಕೆಲಿಂಜ ಶಾಲಾ‌ಮಕ್ಕಳಿಗೆ ಬಹುಮಾನ ವಿತರಿಸಿದರು.

ಉಪವಲಯ ಅರಣ್ಯಾಧಿಕಾರಿ, ಸಮಿತಿ ಕಾರ್ಯದರ್ಶಿ ಪ್ರೀತಂ ಎಸ್‌. ವರದಿ ವಾಚಿಸಿದರು.

ಕಾರ್ಯನಿರ್ವಹಣಾ ಸಮಿತಿ ಸದಸ್ಯರಾದ ಎಂ.ಆರ್.ನೋಣಯ್ಯ, ಚಂದ್ರಶೇಖರ ಬಂಗೇರ, ಅಬ್ದುಲ್ ಖಾದರ್, ಬೇಬಿ ಜೆ.ಆಳ್ವ, ಜಯಪ್ರಕಾಶ್ ಶೆಟ್ಟಿ, ರೇವತಿ, ಗಿರಿಜ, ತೇಜಾಕ್ಷಿ, ಮೀನಾಕ್ಷಿ, ಸಂತೋಷ್ ಕಲ್ಮಲೆ, ಅರಣ್ಯ ರಕ್ಷಕರಾದ ಶೋಭಿತ್ , ದಯಾನಂದ್, ಅನಿತಾ,  ಅರಣ್ಯ ವಿಕ್ಷಕ ಪ್ರವೀಣ, ತೇಜಾಕ್ಷಿ ಸ್ವಾಗತಿಸಿದರು. ಶಶಿಕಲಾ ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Leave a Comment