Coastal Bulletin

ಮೂಡುಬಿದಿರೆ: ಸಮಾಜ ಮಂದಿರ ಸಭಾ (ರಿ.) ವತಿಯಿಂದ 75ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಅಮೃತ ಸಂಭ್ರಮ ಸೆ 26ರಿಂದ 30ರವರೆಗೆ ಸಮಾಜ ಮಂದಿರದಲ್ಲಿ ಸಾಹಿತ್ಯ ಸಾಂಸ್ಕೃತಿಕ ಕಲಾಪಗಳೊಂದಿಗೆ ನಡೆಯಲಿದೆ.

ಸಂಜೆ 7 ಕ್ಕೆ ಸಮಾಜ ಮಂದಿರದಲ್ಲಿ ಮೂಡುಬಿದಿರೆಯ ಮಣ್ಣಿನ ಮಗ, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿ ದಸರಾ ಉತ್ಸವ ಅಮೃತ ಸಂಭ್ರಮವನ್ನು ಉದ್ಘಾಟಿಸಲಿದ್ದಾರೆ. 

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ  ಮುಖ್ಯ ಅತಿಥಿಯಾಗಿದ್ದು  ಮಾಜಿ ಸಚಿವ, ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಸಾಧಕರಾದ ಡಾ. ವೀರಪ್ಪ ಮೊಯಿಲಿ, ಡಾ. ಮೋಹನ ಆಳ್ವರಿಗೆ ಸಮಾಜ ಮಂದಿರ ಪುರಸ್ಕಾರ ಪ್ರದಾನ ನಡೆಯಲಿದೆ.

ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ "ಶರಸೇತು ಬಂಧ' ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ಸೆ 27 ರಂದು ಸಂಜೆ 7ರಿಂದ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ  ಕೆ. ಪಿ. ಸುಚರಿತ ಶೆಟ್ಟಿ, ಅಧ್ಯಕ್ಷತೆಯಶಿಕ್ಷಣ ಚಿಂತನದಲ್ಲಿ ಶಿಕ್ಷಣ ತಜ್ಞ ಉಡುಪಿಯ ಡಾ. ಮಹಾಬಲೇಶ್ವರ ರಾವ್ ಅವರಿಂದ 'ಶಾಲಾ ಪಠ್ಯ ಪುಸ್ತಕಗಳ ರಚನೆ ಸಮಸ್ಯೆಗಳು, ಸವಾಲುಗಳು' ಕುರಿತ ಉಪನ್ಯಾಸವಿದೆ.ಬಳಿಕ ಆರಾಧನಾ ನೃತ್ಯಕೇಂದ್ರ, ಮೂಡುಬಿದಿರೆ ನಾಟ್ಯ ವಿದುಷಿ ಶ್ರೀಮತಿ ಸುಖದಾ  ಇವರ ಶಿಷ್ಯರಿಂದ  'ನೃತ್ಯ ಸಿಂಚನ' ಕಾರ್ಯಕ್ರಮವಿದೆ.

ಸೆ 28 ರಂದು ಸಂಜೆ 7ರಿಂದ ವರ್ಧಮಾನ ಪ್ರಶಸ್ತಿ ಪೀಠ (ಇದರ 2021 ಸಾಲಿನ ವರ್ಧಮಾನ ಪ್ರಶಸ್ತಿ ಪ್ರದಾನ ಜೈನ ಮಠದ ಭಟ್ಟಾರಕ ಶ್ರೀಗಳವರ ಉಪಸ್ಥಿತಿಯಲ್ಲಿ  ಪ್ರಶಸ್ತಿ ಪೀಠದ ಅಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ. ಗಜಾನನ ಶರ್ಮ (ವರ್ಧಮಾನ ಸಾಹಿತ್ಯ ಪ್ರಶಸ್ತಿ ) ಬೆಂಗಳೂರು ಡಾ. ಎಚ್. ಎಸ್. ಸತ್ಯನಾರಾಯಣ ಚಿಕ್ಕಮಗಳೂರು ಅವರಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ "ಯಕ್ಷ-ಗಾನ, ನಾಟ್ಯವೈಭವ ಹಮ್ಮಿಕೊಳ್ಳಲಾಗಿದೆ.

ಸೆ 29 ರಂದು ಸಂಜೆ 7ರಿಂದ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಅಧ್ಯಕ್ಷ  ವೇಣುಗೋಪಾಲ ಶೆಟ್ಟಿ ಕೆ. ಅಧ್ಯಕ್ಷತೆಯ

ವಿಚಾರ ಮಂಥನದಲ್ಲಿ ಚಿಂತಕರು, ಲೇಖಕ ಅರವಿಂದ ಚೊಕ್ಕಾಡಿ ಮೂಡುಬಿದಿರೆ 'ಮಾಧ್ಯಮಗಳು ಮತ್ತು ಸಾಮಾಜಿಕ ಸ್ವಾಸ್ಥ್ಯ' ಕುರಿತು ಉಪನ್ಯಾಸ ನೀಡಲಿದ್ದಾರೆ. ಬಳಿಕ ಸನಾತನ ನಾಟ್ಯಾಲಯ, ಮಂಗಳೂ ನಾಟ್ಯ ಕಲಾ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ ಇವರ ಮೂಡುಬಿದಿರೆ ಮತ್ತು ಮಂಗಳೂರಿನ ಶಿಷ್ಯರಿಂದ 'ಸನಾತನ ನಾಟ್ಯಾಂಜಲಿ' ಕಾರ್ಯಕ್ರಮವಿದೆ. ಸೆ 29 ರಂದು ಸಂಜೆ 7ರಿಂದ ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ ಎ. ಕೋಟ್ಯಾನ್  ಅಧ್ಯಕ್ಷತೆ ವಹಿಸಲಿದ್ದಾರೆ.  ಜಾನಪದ ವಿದ್ವಾಂಸ ಉಡುಪಿಯ ಡಾ. ಗಣನಾಥ ಶೆಟ್ಟಿ ಎಕ್ಕಾರು  ತುಳು ಸಂಸ್ಕೃತಿಯ ಶಕ್ತಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಳಿಕ ಟಾಪ್ ಎಂಟರ್ಟೈನಸರ್್ ಡ್ಯಾನ್ಸ್ ಅಕಾಡೆಮಿ, ಮೂಡುಬಿದಿರೆ ಇವರಿಂದ 'ನೃತ್ಯ ವೈವಿಧ್ಯ' ಕಾರ್ಯಕ್ರಮವಿದೆ.

21 ಸಾಧಕರಿಗೆ ಅಮೃತ ಸಮ್ಮಾನ:

75ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದ ಹಿನ್ನೆಲೆಯಲ್ಲಿ ಈ ಬಾರಿ ಐದು ದಿನಗಳ ಅವಧಿಯಲ್ಲಿ  ಸಾಹಿತ್ಯ ಸಂಸ್ಕೃತಿರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಆಯ್ದ 21 ಸಾಧಕರನ್ನು ಅಮೃತ ಸಮ್ಮಾನದೊಂದಿಗೆ ಗೌರವಿಸಲಾಗುತ್ತಿದೆ. ಸದಾನಂದ ನಾರಾವಿ ( ಸಾಹಿತ್ಯ), ಉಗ್ಗಪ್ಪ ಪೂಜಾರಿ(ಜನಪದ ಸಾಹಿತ್ಯ), ಸರಸ್ವತಿ ಬಿ(ಶಿಕ್ಷಣ, ಆರಾಧನೆ), ನಾರಾಯಣ.ಎಸ್. ಭಂಡಾರಿ (ಶಾಸ್ತ್ರೀಯ ಸಂಗೀತ), ರಾಯಿ ರಾಮಚಂದ್ರ ಪೈ ( ಕಾವ್ಯ),ಎಂ. ಪದ್ಮನಾಭ (ಧಾರ್ಮಿಕ ಕಲೆ), ಪ್ರಪುಲ್ಲಾ ಎಂ. ಶೆಟ್ಟಿ ( ಯೋಗ ಶಿಕ್ಷಣ),ಜಯಂತ ಆಚಾರ್ ( ಸಂಗೀತ ಕಲಾವಿದ), ಸುರೇಶ್ ಎಂ. ಎ (ವಾದನ), ಪಿ.ಎಂ.ಹಸನಬ್ಬ (ಗಾಯನ) , ವೆಂಕಟೇಶ ಬಂಗೇರ (ನಾಟ್ಯ ಕಲೆ), ಮಣಿ ಕೋಟೆಬಾಗಿಲು( ರಂಗ ಭೂಮಿ), ರಾಜೇಂದ್ರ ಕುಮಾರ್ ಜೈನ್ (ಪೇಪರ್ ರಾಜಾ) (ಪತ್ರಿಕಾ ಪ್ರಸರಣ),  ಅನುಪಮಾ ರಾಮದಾಸ್ ಶೆಣೈ (ದಾಸ ಸಾಹಿತ್ಯ) ಪೂರ್ಣಿಮಾ ಪದ್ಮನಾಭ ಪ್ರಭು (ಪ್ರಸಾದನ), ಪ್ರಭಾಕರ್ ಕುಲಾಲ್ (ಪತ್ರಿಕಾ ಪ್ರಸರಣ), ಎಂ.ಪಿ.ಪದ್ಮನಾಭ ಕಾಮತ್( ಮೃಣ್ಮಯ ಕಲೆ),ಎಂ.ಶಾಂತರಾಮ ಕುಡ್ವ (ಯಕ್ಷಗಾನ), ನವೀನ್ ಸಾಲ್ಯಾನ್( ಪತ್ರಿಕೋದ್ಯಮ), ), ಲಾಯ್ಡ್ ಎ.ರೇಗೋ (ಸಾಹಿತ್ಯ),  ಬೋಂಟಡ್ಕ ಚಂದ್ರಕಾಂತ ಭಟ್ (ಹರಿಕಥೆ) ,  ಅವರನ್ನು ಅಮೃತ ಸಮ್ಮಾನದೊಂದಿಗೆ ಗೌರವಿಸಲಾಗುತ್ತಿದೆ.

Leave a Comment