ಮಂಗಳೂರು : ಸ್ಕೂಟರ್ ಶೋ ರೂಂ ಅಗ್ನಿಗಾಹುತಿಯಾಗಿರುವ ಘಟನೆ ಸಂಭವಿಸಿದೆ. ಕಂಕನಾಡಿಯ ನಾಗುರಿಯ ಒಕಿನವ ಬ್ಯಾಟರಿ ಸ್ಕೂಟರ್ ಶೋ ರೂಂ ನಲ್ಲಿ ಅನಾಹುತ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಇದರಿಂದ ಹಲವು ಸ್ಕೂಟರ್ ಬೆಂಕಿಗಾಹುತಿಯಾಗಿದೆ.
ಸ್ಕೂಟರ್ ಶೋ ರೂಂ
ಮೇಲೆ ಮನೆ ಇದ್ದು, ಅದು ಹಮೀದ್ ಗೆ ಸೇರಿದೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ.
















