ಬಂಟ್ವಾಳ :ಶ್ರೀ ರಕ್ತೇಶ್ವರಿ ಯುವಕ ಸಂಘ (ರಿ.) ನೇರಂಬೋಳು- ಬಂಟ್ವಾಳ ಇದರ ವತಿಯಿಂದ ಉಚಿತ ಶಾಲಾ ಪುಸ್ತಕ ವಿತರಣಾ ಕಾರ್ಯಕ್ರಮ ಮೇ 21ರಂದು ಸಂಘದ ವಠಾರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 53 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಸಂಘದ ನಿಯಮದಂತೆ ಒಂದು ವಿದ್ಯಾರ್ಥಿಯ ಸಂಪೂರ್ಣ ಶಾಲಾ ವೆಚ್ಚ ಭರಿಸಲಾಯಿತು. ಹಾಗೂ 24-25ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶೇಕಡಾ 85%ಕ್ಕಿಂತ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು
ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಗಣೇಶ್ ಪೂಜಾರಿ ಗೌರವ ಅಧ್ಯಕ್ಷರಾದ ಹರೀಶ್ಚಂದ್ರ ಪೂಜಾರಿ, ಗೌರವ ಸಲಹೆಗಾರ ಚಂದ್ರಹಾಸ, ಮಾಜಿ ಅಧ್ಯಕ್ಷರುಗಳಾದ ಮನೋಹರ್ ನೇರಂಬೋಳು, ಗಣೇಶ್ ಆಚಾರ್ಯ ಕಾರ್ಯದರ್ಶಿ ಯಶೋಧರ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ರವೀಂದ್ರ ಮೂಲ್ಯ ಕಾರ್ಯಕ್ರಮ ನಿರ್ವಹಿಸಿದರು.














