Coastal Bulletin

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಸ್ಥಾಪಕರಲ್ಲೋರ್ವರಾದ 'ಸಮಾಜ ಸೇವಾ ರತ್ನ' , ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಳಪ್ಪ ಅವರ 100 ನೇ ವರ್ಷದ ಜನ್ಮದಿನಾಚರಣೆಯ ಪ್ರಯುಕ್ತ " ಸಮಾಜ ಸೇವಾ ಸಹಕಾರಿ ಸವಿ ಸಂಭ್ರಮ-2022" ಕಾರ್ಯಕ್ರಮವು ಫೆ. 27 ರಂದು‌ ಬೆಳಿಗ್ಗೆ 10 ಗಂಟೆಗೆ ಬಂಟ್ವಾಳ ಬೈಪಾಸ್ ನಲ್ಲಿರುವ ಸಂಘದ ಕಚೇರಿಯಲ್ಲಿ‌ ನಡೆಯಲಿದೆ‌ ಎಂದು ಅಧ್ಯಕ್ಷ ಸುರೇಶ ಕುಲಾಲ್ ತಿಳಿಸಿದ್ದಾರೆ.

ಗುರುವಾರ ಸಂಘದ ಕೇಂದ್ರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಅವರು ಆಶೀರ್ವವಚನ ನೀಡಲಿದ್ದಾರೆ. ಸಂಸದ‌ ನಳಿನ್ ಕುಮಾರ ಕಟೀಲ್ ,ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು, ಕಲ್ಲಡ್ಕ‌ ರೈ.ಸೇ.ಸ.ಸಂಘದ ಅಧ್ಯಕ್ಷರಾದ ಪದ್ಮನಾಭ ಕೊಟ್ಟಾರಿ, ಬೆಂಗಳೂರು‌ ಕುಲಾಲ ಸಂಘದ‌ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಡುಪಿ ಸರಕಾರಿ

ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ದುಗ್ಗಪ್ಪ ಕಡೆಕಾರ್‌ ಅವರು ಪ್ರಧಾನ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ

ಅಂದು ಬೆಳಿಗ್ಗೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯವರಿಂದ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಲಿದ್ದು,ಅಗತ್ಯವಿರುವವರಿಗೆ ಕನ್ನಡಕವನ್ನು ವಿತರಿಸಲಾಗುವುದು ಹಾಗಯೇ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸಹಾಯ ಸಂಘಗಳ ಸಮ್ಮಿಲನ ಮತ್ತು ಗುರುತಿಸುವ ಕಾರ್ಯವು ನಢಯಲಿದೆ ಎಂದು ವಿವರಿಸಿದರು.

Leave a Comment