ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕಸಕಡ್ಡಿ, ಮಣ್ಣಿನ ದಿಬ್ಬ. ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ, ಅಪಾಯಕ್ಕೆ ಆಹ್ವಾನ,

ಸಂದೀಪ್ ಸಾಲ್ಯಾನ್
ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕಸಕಡ್ಡಿ, ಮಣ್ಣಿನ ದಿಬ್ಬ. ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿ, ಅಪಾಯಕ್ಕೆ ಆಹ್ವಾನ,

ಬಂಟ್ವಾಳ: ರಸ್ತೆ ಮಧ್ಯೆ ಇರುವ ರಸ್ತೆ ವಿಭಾಜಕದ ಹುಲ್ಲು ತೆರವುಗಳಿಸಿ ಅದರ ಮಣ್ಣು, ಕಸಕಡ್ಡಿಗಳನ್ನು ರಸ್ತೆಯಲ್ಲಿಯೇ ಬಿಟ್ಟು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಹೆದ್ದಾರಿ ಪ್ರಾಧಿಕಾರ ಮಣ್ಣಿನ ದಿಬ್ಬವನ್ನು ರಸ್ತೆಯಲ್ಲಿಯೇ ಬಿಟ್ಟು ಜವಾಬ್ದಾರಿ ಮರೆತಿದೆ!

ಮಂಗಳೂರಿನಿಂದ ಬಿ.ಸಿ.ರೋಡಿನವರೆಗೆ ರಾಷ್ಟೀಯ ಹೆದ್ದಾರಿ ಮಧ್ಯೆ ಇರುವ ರಸ್ತೆ ವಿಭಾಜಕದಲ್ಲಿ ಬೆಳೆದಿದ್ದ ಹುಲ್ಲು, ಮಣ್ಣನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾರ್ಮಿಕರ ಮೂಲಕ ತೆರವುಮಾಡಿ ಸುಂದರಗೊಳಿಸಿದೆ. ಆದರೆ ಬಿ.ಸಿ.ರೋಡಿನ ಕೈಕಂಬ ಬಳಿ ಶಾಂತಿ ಅಂಗಡಿ ಎಲ್ ಐ ಸಿ ಕಟ್ಟಡದ ಮುಂಭಾಗ ತೆರವುಗೊಳಿಸಿದ ಹುಲ್ಲು ಮಣ್ಣುಗಳನ್ನು ರಸ್ತೆ ಮಧ್ಯೆಯೇ ಬಿಟ್ಟು ಹೋಗಲಾಗಿದೆ. ಕೇವಲ ಅರ್ಧಗಂಟೆಯಲ್ಲಿ ಮಾಡಿ ಮುಗಿಸ ಬಹುದಾಗಿದ್ದ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷಿಸಿದ ಪರಿಣಾಮ ಮೂರು ವಾರಗಳಿಂದ ರಸ್ತೆಗೆ ತಾಗಿಕೊಂಡೆ ಇದ್ದು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮಧ್ಯೆ ಮಣ್ಣಿನ ರಾಶಿ ಬಿದ್ದಿರುವುದರಿಂದ ರಾತ್ರಿಯ ವೇಳೆ ವೇಗವಾಗಿ ಸಂಚರಿಸುವ ಬಸ್ಸು ಮತ್ತಿತರ ವಾಹನಗಳ ಚಾಲಕರ ಗಮನಕ್ಕೆ ಬಾರದೆ ಈ ಮಣ್ಣಿನ ದಿಬ್ಬ ಅಪಾಯಕ್ಕೆ ಆಹ್ವಾನ ನೀಡುತ್ತಿದೆ

ರಸ್ತೆಗೆ ಜಾರುತ್ತಿರುವ ಮಣ್ಣು:

ಕಳೆದ ಎರಡು ಮೂರು ದಿನಗಳಿಂದ ಬಾರಿ ಮಳೆಯಾಗುತ್ತಿದ್ದು ನೀರಿಗೆ ಮಣ್ಣೆಲ್ಲಾ ರಸ್ತೆಗೆ ಹರಡುತ್ತಿದೆ. ವಾಹನಗಳ ಸಂಚರಿಸುವ ವೇಳೆ ಕೆಸರಿಗೆ ವಾಹನಗಳು ಸ್ಕಿಡ್ ಆಗುವ ಆತಂಕ ಎದುರಾಗಿದ್ದು ಎನ್ ಎಚ್ ಎ ಐ ಕಾರ್ಮಿಕರ ಬೇಜವಬ್ದಾರಿ ಧೋರಣೆಗೆ ಟೀಕೆ ವ್ಯಕ್ತವಾಗಿದೆ. 

ತಹಶೀಲ್ದಾರ್ ಆದೇಶಕ್ಕೆ

ಬೆಲೆ ಇಲ್ಲ! 

ರಸ್ತೆ ಮಧ್ಯೆ ಇರುವ ಮಣ್ಣಿನ ದಿಬ್ಬವನ್ನು ತೆರವುಗಳಿಸುವಂತೆ ಮೇ.16 ರಂದು ಬಂಟ್ವಾಳ ತಹಶೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎನ್ ಎಚ್ ಎ ಐ ಅಧಿಕಾರಿಗಳಿಗೆ ಬಂಟ್ವಾಳ ತಹಶೀಲ್ದಾರ್ ಅರ್ಚನ ಭಟ್ ಆದೇಶಿದ್ದರು. ತಹಶೀಲ್ದಾರ್ ಆದೇಶವನ್ನು ಗಾಳಿಗೆ ತೂರಲಾಗಿದ್ದು ಮಣ್ಣನ್ನು ರಸ್ತೆಯಿಂದ ತೆರವು ಮಾಡುವ ಯಾವ ಪ್ರಯತ್ನವೂ ನಡೆದಿಲ್ಲ.

ಎನ್ ಎಚ್ ಎ ಐ ನಿಂದಲೇ ತೊಂದರೆ

ರಾಷ್ಟ್ತೀಯ ಹೆದ್ದಾರಿ ಪ್ರಾಧಿಕಾರ ಬಂಟ್ವಾಳ ಭಾಗದಲ್ಲಿ ರಸ್ತೆ ನಿರ್ಮಾಣ, ರಸ್ತೆ ಅಗಲೀರಣ, ವಿಭಾಜಕ ನಿರ್ಮಾಣ, ಡಿವೈಡರ್ ಗಳಿಗೆ ತಡೆಬೇಲಿ ರಚನೆ ಮೊದಲಾದ ಹಲವಾರು ಜನಪಯೋಗಿ ಕೆಲಸಗಳನ್ನು ಮಾಡಿದೆ. ಅದರ ಜೊತೆಗೆ ಡಿವೈಡರ್ ಮಧ್ಯೆ ಹೊಂಡ ನಿರ್ಮಾಣ, ಡಿವೈಡರ್ ಗಳಲ್ಲಿ ಮಣ್ಣಿನ ರಾಶಿ, ಅವೈಜ್ಣಾನಿಕ ಟೋಲ್ ಗೇಟ್, ಟೋಲ್ ತಪ್ಪಿಸುವ ವಾಹನಗಳಿಗೆ ಸುಸಜ್ಜಿತ ಸರ್ವಿಸ್ ರಸ್ತೆಗಳನ್ನು ನಿರ್ಮಿಸಿಕೊಟ್ಟು ಸಾರ್ವಜನಿಕವಲಯದಲ್ಲಿ ವ್ಯಾಪಕ ಟೀಕೆಗೂ ಗುರಿಯಾಗಿದೆ. 

......

ಹೆದ್ದಾರಿ ಇಲಾಖೆ ಹುಲ್ಲು, ಕಸ, ಮಣ್ಣನ್ನು‌ ರಸ್ತೆ ಮಧ್ಯೆ ತೆರವುಗೊಳಿಸದೇ ಬಿಟ್ಟಿರುವುದು ನಗರದ ಅಂದಕ್ಕೂ ಕುಂದುಟಾಗುತ್ತಿದೆ. ಜೊತೆಗೆ ವಾಹನಗಳು ಸಂಚರಿಸುವ ವೇಳೆ ಅಪಘಾತಗಳಾಗುವ ಸಾಧ್ಯತೆಯೂ ಹೆಚ್ಚಿದೆ. ಮೂರು ವಾರಗಳಿಗಿಂತಲೂ ಹೆಚ್ಚು ಸಮಯದಿಂದ ರಸ್ತೆ ಮಧ್ಯವೇ ಮಣ್ಣಿನ ದಿಬ್ಬ ಇದೆ- ಜಯರಾಮ ಕೆ. ಕೈಕಂಬ, ಸಾರ್ವಜನಿಕರು.

Leave a Comment