ಬಂಟ್ವಾಳ :ಬಿಜೆಪಿ ಮಂಗಳೂರು ಮಂಡಲ ವ್ಯಾಪ್ತಿಗೊಳಪಟ್ಟ ಪುದು ಮಹಾಶಕ್ತಿ ಕೇಂದ್ರದ ಚುನಾವಣೆ ಕಾರ್ಯಾ ಲಯದ ಉದ್ಘಾಟನೆ ಸಮಾರಂಭ ಹಾಗೂ ಕಾರ್ಯಕರ್ತರ ಸಂಪರ್ಕ ಸಭೆ ಶುಕ್ರವಾರ ಸಂಜೆ ಕಡೆಗೋಳಿ ಯಲ್ಲಿ ನಡೆಯಿತು.
ಕಡೆಗೋಳಿಯ ಕಾಂಪ್ಲೆಕ್ಸ್ನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಚುನಾವಣಾ ಕಚೇರಿಯನ್ನು ಉದ್ಘಾಟಿ ಸಿದರು. ಬಳಿಕ ನಡೆದ ಕಾರ್ಯಕರ್ತರ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿ, ಮಂಗಳೂರು ಲೋಕ ಸಭಾ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾ ಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಕಾರ್ಯಕರ್ತರ ಉತ್ಸಾಹ ನೋಡಿ ದಾಗ ಗೆಲುವು ನಿಶ್ಚಿತವಾಗಿದೆ, ಕನಿಷ್ಠ 4 ಲಕ್ಷ ಮತದ ಅಂತರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿಯ ಕೈ ಬಲಪಡಿ ಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಮಂಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಮಾತನಾಡಿ, ಈ ಬಾರಿಯ ಚುನಾವಣೆ ವಿಶೇಷವಾಗಿದ್ದು, ನಿರ್ಣಾಯಕ ಚುನಾವಣೆಯಗಲಿದೆ, ಮತದಾರರ ಅಪೇಕ್ಷೆ, ಆಕಾಂಕ್ಷೆಗೆ ಬದ್ಧವಾಗಿ ಕೆಲಸ ಮಾಡುತ್ತೇನೆ, ಹಿಂದುತ್ವ ನನ್ನ ಬದ್ಧತೆ, ಅಭಿವೃದ್ಧಿ
ನನ್ನ ಆದ್ಯತೆ ಎಂದು ತಿಳಿಸಿದರು.
ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷ ಜಗದೀಶ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಪುದು ಮಹಾಶಕ್ತಿ ಕೇಂದ್ರದ ಚುನಾವಣಾ ಪ್ರಭಾರಿ ಸಂತೋಷ್ ಕುಮಾರ್ ಬೋಳಿಯಾರ್, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ
ಸಾಲ್ಯಾನ್, ಪಕ್ಷದ ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ರಾಧಕೃಷ್ಣ ರೈ ಬೂಡಿಯಾರು ದಿನೇಶ್ ಅಮ್ಮೂರು, ಗಣೇಶ್ ಸುವರ್ಣ ತುಂಬೆ, ಮೋಹನ ರಾಜ್, ಸುಜಿತ್, ಯಶವಂತ ಅಮೀನ್, ದಯಾನಂದ ತೊಕ್ಕೊಟ್ಟು ಚಂದ್ರಹಾಸ ಪಂಡಿತ ಹೌಸ್, ದೇವಸ್ಯ ಪ್ರಕಾಶ್ಚಂದ್ರ ರೈ ಜಯಶ್ರೀ ಕರ್ಕೇರ ಉಪಸ್ಥಿತರಿದ್ದರು.
ಬಿಜೆಪಿ ಮಂಗಳೂರು ಮಂಡಲದ ಉಪಾಧ್ಯಕ್ಷ ಮನೋಜ್ ಅಚಾರ್ಯ ನಾಣ್ಯ ಸ್ವಾಗತಿಸಿದರು. ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ ತೇವು ವಂದಿಸಿದರು. ಪ್ರವೀಣ್ ಶೆಟ್ಟಿ ಸುಜೀರು ನಿರೂಪಿಸಿದರು.
ಕಾಠ್ಯಕ್ರಮದ ಪೂರ್ವಭಾವಿಯಾಗಿ ಕಡೆಗೋಳಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು










