ಬಂಟ್ವಾಳ : ವಿದ್ಯಾ ಯುವಕ ಮಂಡಲ ವಿದ್ಯಾನಗರ ಅಬ್ಬೆಟ್ಟು, ಮೇರಮಜಲು ಇದರ 32 ನೇ ವಾರ್ಷಿಕೋತ್ಸವವು ಫೆ.4ರಂದು ಶನಿವಾರ ಅಬ್ಬೆಟ್ಟು ಶಾಲಾ ರಂಗ ಮಂದಿರದಲ್ಲಿ ನಡೆಯಲಿದೆ.
ಈ ಪ್ರಯುಕ್ತ ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ನಡೆಯಲಿದ್ದು ಶ್ರೀ ಬಾಲವಿಠೋಭ ಭಜನಾ ಮಂಡಳಿ ಪಲ್ಲಿಪಾಡಿ ಇವರಿಂದ ಭಜನಾ ಕಾರ್ಯಕ್ರಮ ನಂತರ ಮಹಾಪೂಜೆ ಜರಗಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ
6 ರಿಂದ ಅಬ್ಬೆಟ್ಟು ಶಾಲಾ ರಂಗಮಂಟಪದಲ್ಲಿ ಸ್ಥಳೀಯ ಪ್ರತಿಭೆಗಳಿಂದ ಹಾಗೂ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ಮತ್ತು ಸಭಾಕಾರ್ಯಕ್ರಮ ಇರಲಿದೆ. ನಂತರ ಕಾಪುರಂಗತರಂಗದ ಕಲಾವಿದರಿಂದ ಅಧ್ಯಕ್ಷರ್ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














