Coastal Bulletin

ಮಂಗಳೂರು: ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ ಘೋಷಿಸಿದೆ.

ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು, ಕರಾವಳಿ ಭಾಗಕ್ಕೆ ನಾವು ಹತ್ತು ಅಂಶಗಳ ಪ್ರತ್ಯೇಕ ಘೋಷಣೆ ಮಾಡುತ್ತಿದ್ದೇವೆ. ಕರಾವಳಿಯಲ್ಲಿ ಉದ್ಯೋಗ, ಬಂಡವಾಳ ಹೂಡಿಕೆ, ಟೂರಿಸಂ ಹಾಗೂ ಭಾವೈಕ್ಯತೆ ಕೋಸ್ಟಲ್ ಡೆವಲಪ್ಮೆಂಟ್ ಅಥಾರಿಟಿ ಮಾಡುತ್ತೇವೆ. ಆ ಅಥಾರಿಟಿಗೆ ವರ್ಷಕ್ಕೆ ಎರಡೂವರೆ ಸಾವಿರ ಕೋಟಿ ರೂ. ಮೀಸಲು ಇಡುತ್ತೇವೆ ಎಂದು ಹೇಳಿದರು.

ನಿನ್ನೆ ಮಂಗಳೂರಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಈ ಬಾರಿ ಕರಾವಳಿ ಕರ್ನಾಟಕಕ್ಕೆ ವಿಶೇಷವಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ. ಕಾಂಗ್ರೆಸ್ ಪ್ರಾಣಾಳಿಕ ಸಮಿತಿ ಪ್ರಥಮವಾಗಿ ಭೇಟಿ ಕೊಟ್ಟು ಹಲವು ಗುಂಪುಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದಿದ್ದರು. ಅದರಂತೆ ಇದೀಗ ಕಾಂಗ್ರೆಸ್ ಕರಾವಳಿ ಭಾಗಕ್ಕೆ 10 ಅಂಶಗಳ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಪ್ರಣಾಳಿಕೆಯ

ಹತ್ತು ಅಂಶ ಇಂತಿವೆ :

1.ಟೆಕ್ಸ್ ಟೈಲ್ ಪಾರ್ಕ್ ಸ್ಥಾಪನೆ ಮೂಲಕ ತಾಯಂದಿರು ಮತ್ತು ಮಹಿಳೆಯರಿಗೆ ಉದ್ಯೋಗ.

2.ಮೀನುಗಾರರಿಗೆ 10 ಲಕ್ಷದ ಇನ್ಯೂರೆನ್ಸ್ ಹಾಗೂ ಮೀನುಗಾರರ ಮನೆಯ ಯಜಮಾನಿ ಮಹಿಳೆಗೆ ಬಡ್ಡಿ ರಹಿತ ಒಂದು ಲಕ್ಷ ರೂ ಸಾಲ‌.

3ಬೋಟ್ ಖರೀದಿಗೆ 25% ಸಬ್ಸಿಡಿ

4.ಮೀನುಗಾರಿಕಾ ಬೋಟ್ ಗಳಿಗೆ ಹೆಚ್ಚುವರಿ ಡಿಸೇಲ್ ಪೂರೈಕೆ

5.ಬಿಲ್ಲವ ಸಮಾಜ, ಈಡಿಗ ಸಮಾಜದವರಿಗೆ ಪುನರ್ವಸತಿ ಕಲ್ಪಿಸಲು ನಾರಾಯಣ ಅಭಿವೃದ್ಧಿ ನಿಗಮ ಸ್ಥಾಪನೆ.

6.ಈ ನಿಗಮಕ್ಕೆ ವರ್ಷಕ್ಕೆ 250 ಕೋಟಿ ಅನುದಾನ ಮೀಸಲು‌.

7.ಬಂಟ ಸಮುದಾಯದ ಅಭಿವೃದ್ಧಿಗೂ ವಾರ್ಷಿಕ 250 ಕೋಟಿ ಮೀಸಲು.

8.ಅಡಿಕೆ ಬೆಳೆ ಮತ್ತು ಅದರ ರೋಗದ ಪರಿಹಾರಕ್ಕೆ 50 ಕೋಟಿ ಮೀಸಲು.

9.ಕರಾವಳಿಯಲ್ಲಿ ಸ್ವಾಮೀ ವಿವೇಕಾನಂದರ ಹೆಸರಿನಲ್ಲಿ ಕೋಮು ಸಾಮಾಜಿಕ ‌ಮತ್ತು ಸೌಹಾರ್ದತೆ ಸಮಿತಿ‌.

10.ಪ್ರತೀ ಪಂಚಾಯತ್ ನಲ್ಲೂ ಈ ಸಮಿತಿಗೆ ಅನುದಾನ ‌ಕೊಡಲಾಗುವುದು.

Leave a Comment