ನೆತ್ತರಕೆರೆ : ನವೋದಯ ಮಿತ್ರ ಕಲಾ ವೃಂದ ಹಾಗೂ , ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಸಹಯೋಗದಲ್ಲಿ ಯೋಗ ಶಿಬಿರಕ್ಕೆ ಚಾಲನೆ.

Coastal Bulletin
ನೆತ್ತರಕೆರೆ : ನವೋದಯ ಮಿತ್ರ ಕಲಾ ವೃಂದ ಹಾಗೂ , ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ ಸಹಯೋಗದಲ್ಲಿ ಯೋಗ ಶಿಬಿರಕ್ಕೆ ಚಾಲನೆ.

ಬಂಟ್ವಾಳ :ಗ್ರಾಮ ವಿಕಾಸ ಪ್ರತಿಷ್ಠಾನ, ನೆತ್ತರಕೆರೆ ನವೋದಯ ಮಿತ್ರ ಕಲಾ ವೃಂದ (ರಿ.) ನೇತ್ರಾವತಿ ಮಾತೃ ಮಂಡಳಿ, ನೆತ್ತರಕೆರೆ, ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ (ರಿ.) ಮಂಗಳೂರು ಇವರ ಸಹಭಾಗಿತ್ವದಲ್ಲಿ ಯೋಗ ಶಿಕ್ಷಕರಾದ ಡಾ| ರಘುವೀರ ಅವಧಾನಿ ಅವರ ಶಿಷ್ಯರಾದ ಪ್ರತಿಮಾ, ಗೀತಾ ಭಟ್ ಹಾಗೂ ಶಕುಂತಲಾ ಶೆಟ್ಟಿ ಇವರ ನೇತೃತ್ವದಲ್ಲಿ ನಡೆಯುವ ಯೋಗ ಶಿಬಿರವು ಜೂ. 22ರಂದು ಶನಿವಾರದಂದು ಬೆಳಿಗ್ಗೆ ನೆತ್ತರಕೆರೆಯ ಮುಂಡಾಜೆ ಗುತ್ತು ವಿಠ್ಠಲ ಶೆಟ್ಟಿ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.

ಪ್ರತೀದಿನ ಬೆಳಿಗ್ಗೆ ಗಂಟೆ 5-30ರಿಂದ 6-30ರವರೆಗೆ ನಡೆಯುವ ಈ ಶಿಬಿರವನ್ನು ಡಾ| ಶಿವಪ್ರಸಾದ್ ಶೆಟ್ಟಿ ಬಿ.ಸಿ.ರೋಡು ಅಧ್ಯಕ್ಷರು, ಶ್ರೀ ಯೋಗನಿಧಿ ಪತಂಜಲಿ ಪ್ರತಿಷ್ಠಾನ (ರಿ.) ಮಂಗಳೂರು ಇವರು ಉದ್ಘಾಟಿಸಿ ಶಿಬಿರಕ್ಕೆ

ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ನವೋದಯ ಮಿತ್ರ ಕಲಾ ವೃಂದದ ಸಂಚಾಲಕ ದಾಮೋದರ ನೆತ್ತರಕೆರೆ, ಅಧ್ಯಕ್ಷ ಸಂತೋಷ ಕುಮಾರ್, ಅಮ್ಟಾಡಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಸುರೇಶ ಭಂಡಾರಿ ಅರ್ಬಿ ಮತ್ತಿತರರು ಉಪಸ್ಥಿತರಿದ್ದರು.

Leave a Comment