ತುಂಬೆ :ರಸ್ತೆ ಬದಿ ಕಸ ಎಸೆದವರಿಗೆ ದಂಡ ವಿಧಿಸಿದ ಗ್ರಾಮ ಪಂಚಾಯತ್‌. ಎಚ್ಚರಿಕೆ ಇನ್ನು ಮುಂದೆ ತುಂಬೆ ಆಸುಪಾಸಿನಲ್ಲಿ ರಸ್ತೆ ಬದಿ ಕಸ ಎಸೆದರೆ ಬೀಳುತ್ತೆ ದಂಡ...

Coastal Bulletin
ತುಂಬೆ :ರಸ್ತೆ ಬದಿ ಕಸ ಎಸೆದವರಿಗೆ ದಂಡ ವಿಧಿಸಿದ ಗ್ರಾಮ ಪಂಚಾಯತ್‌. ಎಚ್ಚರಿಕೆ ಇನ್ನು ಮುಂದೆ ತುಂಬೆ ಆಸುಪಾಸಿನಲ್ಲಿ ರಸ್ತೆ ಬದಿ ಕಸ ಎಸೆದರೆ ಬೀಳುತ್ತೆ ದಂಡ...

ಬಂಟ್ವಾಳ : ತಾಲೂಕಿನ ತುಂಬೆ ಗ್ರಾಮ ಪಂಚಾಯತ್‌ ನಿಂದ ಕಳೆದ ಹಲವು ಸಮಯಗಳಿಂದ ಸ್ವಚ್ಛತಾ ಅಭಿಯಾನ,ಸ್ವಚ್ಛತೆಗಾಗಿ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ನಡೆಸಿದೆ . ಹಾಗಿದ್ದರೂ ರಸ್ತೆ ಬದಿ ಕಸ ಎಸೆಯುವುದು ಕಡಿಮೆಯಾಗಿರಲಿಲ್ಲ. ಇದೀಗ ರಸ್ತೆ ಬದಿ ಕಸ ಎಸೆದ ಪ್ರಕರಣವೊಂದನ್ನು ಪತ್ತೆ ಮಾಡಿ ತುಂಬೆ ಗ್ರಾಪಂ ದಂಡ ವಿಧಿಸಿದೆ.

ತುಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಥಾ ಹಾಲ್ ಸರ್ವೀಸ್ ರಸ್ತೆ ಪಕ್ಕದಲ್ಲಿ ಜೂ 09ರಂದು ಪೂರ್ವಾಹ್ನ 8.44 ಗಂಟೆಗೆ ಮಾರುತಿ 800 ವಾಹನ ದಲ್ಲಿ ಬಂದು ತ್ಯಾಜ್ಯ ಕಸಕಡ್ಡಿಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಬಿಸಾಡುವುದನ್ನು ಸಿ ಸಿ ಕ್ಯಾಮೆರಾದಲ್ಲಿ ಪತ್ತೆ ಹಚ್ಚಿದ

ತುಂಬೆ ಪಂಚಾಯತ್ ಆಡಳಿತವು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ, ನಂತರ ಗ್ರಾ ಪಂ ನಲ್ಲಿ ವಾಹನ ಮಾಲಕರು ದಂಡ ಕಟ್ಟಿದ ಘಟನೆ ನಡೆದಿದೆ.ಮುಂದೆ ಸಿಕ್ಕಿದಲ್ಲಿ ಕಸ ಎಸೆಯುವವರಿಗೆ ಈ ಪ್ರಕರಣವು ಎಚ್ಚರಿಕೆಯ ಗಂಟೆಯಾಗಿದೆ ಎಂದು ಗ್ರಾ ಪಂ ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment