ಕೊಡ್ಮಾಣ್ : ಮೇ.26, ಕೀರ್ತಿಶೇಷ ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ. "ಚೈತನ್ಯ" ಪುಸ್ತಕ ಬಿಡುಗಡೆ, ಹಿಂದೂ ರುದ್ರಭೂಮಿ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ. ನಾಮಫಲಕ ಅನಾವರಣ.

Coastal Bulletin
ಕೊಡ್ಮಾಣ್ : ಮೇ.26, ಕೀರ್ತಿಶೇಷ ಕೊಡಮಣ್ಣ್ ಕಾಂತಪ್ಪ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ. "ಚೈತನ್ಯ" ಪುಸ್ತಕ ಬಿಡುಗಡೆ, ಹಿಂದೂ ರುದ್ರಭೂಮಿ ಹಾಗೂ ಆಂಬುಲೆನ್ಸ್ ಲೋಕಾರ್ಪಣೆ. ನಾಮಫಲಕ ಅನಾವರಣ.

ಬಂಟ್ವಾಳ :ಕೀರ್ತಿಶೇಷ ಕೊಡಮಣ್ಣ್ ಕಾಂತಪ್ಪ ಶೆಟ್ಟಿಯವರ ಪ್ರಥಮ ವರ್ಷದ ಸಂಸ್ಮರಣಾ ಕಾರ್ಯಕ್ರಮವು ಮೇ 26ರಂದು ಆದಿತ್ಯವಾರ ಕೊಡಮಣ್ಣ್ ಕಾಂತಪ್ಪ ಶೆಟ್ಟಿಯವರ ಸ್ವಗೃಹ 'ಪುಷ್ಪಾನುಗೃಹ'ದಲ್ಲಿ ನಡೆಯಲಿದೆ.

ಅಂದು ಪೂರ್ವಾಹ್ನ ಗಂಟೆ 9-30ರಿಂದ ದೇವರ ನಾಮ ಸಂಕೀರ್ತಣೆ, 11ರಿಂದ ಸಂಸ್ಮರಣಾ ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಮರಣಾ ಪುಸ್ತಕ "ಚೈತನ್ಯ" ಬಿಡುಗಡೆಯಾಗಲಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆ ಭಾ ಕಾರ್ಯಕಾರಿಣಿ ಆಹ್ವಾನಿತ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಸಂಸ್ಮರಣಾ ಸಂದೇಶವನ್ನು ನೀಡಲಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳು ನಡೆಯಲಿದ್ದು, ಕೊಡ್ಮಾಣ್ ನಲ್ಲಿ ಹಿಂದೂ ರುದ್ರಭೂಮಿ ಲೋಕಾರ್ಪಣೆಯಾಗಲಿದೆ, ಗ್ರಾಮ ವಿಕಾಸ ಅಬ್ಬೆಟ್ಟು ಮೇರಮಜಲು ಗ್ರಾಮದ ವತಿಯಿಂದ ತುರ್ತು ವಾಹನ

"ಆಂಬುಲೆನ್ಸ್"ಸೇವೆ ಲೋಕಾರ್ಪಣೆ ಹಾಗೂ ಮದಕ – ಕೊಡಮಣ್ ರಸ್ತೆಗೆ ಕಾಂತಪ್ಪ ಶೆಟ್ಟಿ ನಾಮಫಲಕದ ಅನಾವರಣ ನಡೆಯಲಿದೆ.

ಡಾ. ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು. ನ. ಸೀತಾರಾಮ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್, ಡಾ| ರವೀಶ್ ತುಂಗಾ, ಖ್ಯಾತ ಮನೋ ವೈದ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಅಪರಾಹ್ನ ಗಂಟೆ 1ರಿಂದ ಸಹಭೋಜನ, ಕಾರ್ಯಕ್ರಮ ನಡೆಯಲಿದೆ.

Leave a Comment