ಪುತ್ತೂರು: ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆ ಉಪ್ಪಿನಂಗಡಿ ಪುತ್ತೂರು ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಅನಾಹುತ ಯುನೈಟೆಡ್ ಎಫರ್ಟ್ ಫೌಂಡೇಶನ್ ಇವರ ವತಿಯಿಂದ "ನನ್ನ ಭವಿಷ್ಯ ನನ್ನ ಆಯ್ಕೆ" ಎಂಬ ವಿಷಯದ ಕುರಿತು "ಕೆರಿಯರ್ ಮೇಳ- 2024-25 ವನ್ನು ಇತ್ತೀಚೆಗೆ ಏರ್ಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪುತ್ತೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಂಜನೇಯ ರೆಡ್ಡಿ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ,ವೃತ್ತಿ ಮಾರ್ಗದರ್ಶನದ ಬಗ್ಗೆ ಮಾಹಿತಿ ತಿಳಿಸಿದರು ಹಾಗೂ ವಿದ್ಯಾರ್ಥಿಗಳಿಗೆ ದುಶ್ಚಟಗಳು ಹಾಗೂ ಸಾಮಾಜಿಕ ಅಪರಾಧಗಳನ್ನು ಮಾಡದಂತೆ ಮಾರ್ಗದರ್ಶನ ನೀಡಿದರು. ವಸತಿ ಶಾಲೆಯ ಹಿಂದಿ ಶಿಕ್ಷಕ ಜಯಪ್ರಕಾಶ ಪಿ ರವರು ಪ್ರಾಸ್ತವಿಕವಾಗಿ
ವೃತ್ತಿ ಮಾರ್ಗದರ್ಶನದ ಬಗ್ಗೆ ಮಾತನಾಡಿದರು.ಶಾಲಾ ಪ್ರಾಂಶುಪಾಲ ಸತೀಶ್ ಟಿ ಇವರು ಅಧ್ಯಕ್ಷತೆಯ ಭಾಷಣದ ಮೂಲಕ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದ ಸಂಯೋಜಕ ಸಂಜಯ್ ಭಡಕರ್ ಮತ್ತು ವಸಂತ ಎಂ ಹಾಗೂ ಶಾಲೆಯ ಎಲ್ಲಾ ಸಿಬ್ಬಂದಿಗಳು,ವಿದ್ಯಾರ್ಥಿಗಳು ಹಾಜರಿದ್ದರು.ಕುಮಾರಿ ಪೂರ್ವಿ 9ನೇ ತರಗತಿ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರ ಕಾರ್ತಿಕ್ 9ನೇ ತರಗತಿ ವಂದಿಸಿದರು.














