ಕೊಡ್ಮಾಣ್: ಆ.27ರಂದು ಶ್ರೀ ಕೃಷ್ಣ ಲೀಲೋತ್ಸವ ಮೊಸರು ಕುಡಿಕೆ ಉತ್ಸವ

Coastal Bulletin
ಕೊಡ್ಮಾಣ್: ಆ.27ರಂದು ಶ್ರೀ ಕೃಷ್ಣ ಲೀಲೋತ್ಸವ ಮೊಸರು ಕುಡಿಕೆ ಉತ್ಸವ

ಬಂಟ್ವಾಳ :ಇಲ್ಲಿನ ಕೊಡ್ಮಾಣ್ ಗ್ರಾಮದ ಮದಕ ಎಂಬಲ್ಲಿ ಶ್ರೀ ಕೃಷ್ಣ ಜನ್ಮೋತ್ಸವ ಸಮಿತಿ ಕೊಡ್ಯಾಣ್ ಇದರ ಅಶ್ರಯದಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣ ಲೀಲೋತ್ಸವ ಮೊಸರು ಕುಡಿಕೆ ಉತ್ಸವವು ಆ.27ರಂದು ಮಂಗಳವಾರ ನಡೆಯಲಿದೆ.

ಅಂದು ಬೆಳಿಗ್ಗೆ ಗಂಟೆ 9-30ಕ್ಕೆ ಶ್ರೀ ಕೃಷ್ಣ ದೇವರಿಗೆ ಪೂಜೆ, ಭಜನೆ ಮಧ್ಯಾಹ್ನ ಗಂಟೆ 12-30ಕ್ಕೆ ಮಹಾಪೂಜೆ. ಅಪರಾಹ್ನ ಗಂಟೆ 2-30ರಿಂದ ಮೊಸರು ಕುಡಿಕೆಯ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ಕಲಾ ತಂಡದವರಿಂದ ಮನರಂಜನೆ,

ಸೂರ್ ಸಾಗರ್ ಪ್ಯೂಶನ್ ಬ್ಯಾಂಡ್ ಮೂಡಬಿದ್ರೆ ತಂಡದವರಿಂದ ರಾಗ ಸಂಭ್ರಮ, ಸಂಜೆ ಬಹುಮಾನ ವಿತರಣಾ ಕಾರ್ಯಕ್ರಮ ನಂತರ 6-00ಕ್ಕೆ ಶ್ರೀ ಕೃಷ್ಣ ಲೀಲೋತ್ಸವದ ವೈಭವದ ಮೆರವಣಿಗೆಯು ನೆತ್ತರಕೆರೆಗೆ ಹೋಗಿ ಅಲ್ಲಿಂದ ಮತ್ತೆ ಉತ್ಸವ ಮಂಟಪಕ್ಕೆ ತಲುಪಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment