Coastal Bulletin

ವಿಟ್ಲ : ಕಳೆದ ಒಂದು ವಾರದಿಂದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಶಿರಸಿ ಮೂಲದ ಅನ್ಯಕೋಮಿನ ಜೋಡಿಗಳು ವಿಟ್ಲದ ಪಳಿಕೆಯಲ್ಲಿ ಪತ್ತೆಯಾಗಿದ್ದಾರೆ.

ವಿಟ್ಲ ದ ಬೊಬ್ಬೆಕೇರಿ ಪೆಟ್ರೋಲ್ ಬಂಕ್ ನಲ್ಲಿ  ಕೆಲಸ ಮಾಡುತ್ತಿದ್ದ ಅನ್ಯಕೋಮಿನ ಯುವಕ ತಾನೊಬ್ಬ ಹಿಂದೂ ಹಾಗೂ ತನ್ನ ಹೆಸರು ವಿಜಯ್ ಎಂಬುದಾಗಿ ಎಲ್ಲರನ್ನು ನಂಬಿಸಿ ವಂಚಿಸಿದ್ದಾನೆ.

ಕೆಲ ದಿನಗಳಿಂದ ಹಿಂದೂ ಯುವತಿಯ ಜೊತೆ ವಿಟ್ಲದ ಪಳಿಕೆಯಲ್ಲಿ ಬಾಡಿಗೆಯಲ್ಲಿದ್ದ, ಈತ ತಾನು ಹಿಂದೂ ಎಂದು

ತಿಳಿಯಲು ಕೈಗೆ ಹಿಂದೂ ಧರ್ಮದ ನೂಲನ್ನು ಕಟ್ಟಿದ್ದ. ಇವನು ಅನ್ಯಕೋಮಿನ ಯುವಕ ಎಂದು ತಿಳಿದು ಹಿಂದೂ ಸಂಘಟನೆಯ ಕಾರ್ಯಕರ್ತರು ವಿಟ್ಲ ಪೋಲಿಸರಿಗೆ ಮಾಹಿತಿ ನೀಡಿ ಜೋಡಿಗಳನ್ನು ಬಂಧಿಸಿದ್ದಾರೆ.

ತನಿಖೆ ಮಾಡುವಾಗ ಈತ ಮುಸ್ಲಿಂ ಯುವಕನಾಗಿದ್ದು, ಹುಸೇನ್‌ ಎಂಬುದಾಗಿ‌ ತಿಳಿದು ಬಂದಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment