Coastal Bulletin

ಬಂಟ್ವಾಳ :ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ತುಂಬೆ ಪದವಿ ಪೂರ್ವ ಕಾಲೇಜಿನಿಂದ 121 ಮಂದಿ ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ. ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 116 ಮಂದಿ ಉತ್ತೀರ್ಣರಾಗಿದ್ದು, ಒಟ್ಟು 96% ಫಲಿತಾಂಶ ಬಂದಿರುತ್ತದೆ.

ವಿಜ್ಞಾನ ವಿಭಾಗದಲ್ಲಿ 100% ಫಲಿತಾಂಶ, ವಾಣಿಜ್ಯ ವಿಭಾಗದಲ್ಲಿ 96% ಫಲಿತಾಂಶ ಹಾಗೂ ಕಲಾ ವಿಭಾಗದಲ್ಲಿ 89% ಫಲಿತಾಂಶ ದಾಖಲಾಗಿದ್ದು, ವಿಜ್ಞಾನ ವಿಭಾಗದಲ್ಲಿ ದೀಕ್ಷಾ 563 ಅಂಕ, ಕಲಾ ವಿಭಾಗದಲ್ಲಿ ಮಹಮ್ಮದ್ ಇರ್ಫಾನ್ 560 ಅಂಕ ಹಾಗೂ ವಾಣಿಜ್ಯ ವಿಭಾಗದಲ್ಲಿ ಆಯಿಷಾ ಶಿಫಾನ 545 ಅಂಕ ಪಡೆದು, ಕಾಲೇಜಿಗೆ

ಪ್ರಥಮ ಸ್ಥಾನಿಗಳಾಗಿದ್ದಾರೆ.

21 ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 68 ಮಂದಿ ಪ್ರಥಮ ಶ್ರೇಣಿಯಲ್ಲಿ, 19 ಮಂದಿ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 10 ಮಂದಿ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಗ್ರಾಮೀಣ ಪ್ರದೇಶದಲ್ಲಿರುವ ಈ ಕಾಲೇಜು ಸರಾಸರಿ ಪ್ರತೀ ವರ್ಷ 95% ಕ್ಕಿಂತ ಅಧಿಕ ಫಲಿತಾಂಶವನ್ನು ಸಾಧಿಸುತ್ತಾ ಬಂದಿರುವುದು ಗಮನಾರ್ಹವಾಗಿದೆ.

Leave a Comment