ಬಂಟ್ವಾಳ :ಸಜಿಪ ಮುನ್ನೂರು ಮಾಗಣೆಯ ಮುದೆಲ್ ಮುಟ್ಟಿ ನಾಲ್ಕಯಿತ್ತಾಯ ದೈವಸ್ಥಾನದ ಅನ್ನಛತ್ರಕ್ಕೆ ಮಾಗಣೆಯ ತಂತ್ರಿಯವರಾದ ಶ್ರೀ ಸೂರ್ಯ ನಾರಾಯಣ ಭಟ್ ಇವರ ನೇತೃತ್ವದಲ್ಲಿ ಫೆ.21ನೇ ಶುಕ್ರವಾರ ಬೆಳಿಗ್ಗೆ 8:28ರ ಶುಭ ಮುಹೂರ್ತದಲ್ಲಿ,ಕೋಟಿ ಮಾರ್ತಾರ ಸಮ್ಮುಖದಲ್ಲಿ ಅಧ್ಯಕ್ಷರಾದ ಮಹಾಬಲ ಕೊಟ್ಟಾರಿ ಹಾಗೂ ದೈವದ ಗಡಿ ಪ್ರಧಾನರು,ಪ್ರಮುಖರು, ಚಾಕಿರಿ ವರ್ಗದವರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿತು.














