ಬಂಟ್ವಾಳ :ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಇದರ ಬ್ರಹ್ಮಕಲಶೋತ್ಸವ ಪ್ರಯುಕ್ತ ಡಿಸೆಂಬರ್ 12ರಂದು ಮಾತೃ ಸಮಾವೇಶ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಕಳ್ಳಿಗೆ, ತುಂಬೆ, ಬಿ.ಮೂಡ, ನಡು ಗ್ರಾಮಗಳ ಪ್ರಮುಖ ಮಾತೆಯರ ಸಭೆ ದೇವಸ್ಥಾನದ ರಾಜಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಬ್ರಹ್ಮಕಲಶ ಪ್ರಯುಕ್ತ ನಡೆಯಲಿರುವ ಮಾತೃ ಸಮಾವೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ಮಾತೆಯರು ಅತ್ಯಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮಾತೆಯರು ಸಮಾವೇಶದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದರು.
ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಉಪಾಧ್ಯಾಯ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ತೇವು ತಾರನಾಥ ಕೊಟ್ಟಾರಿ, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಸದಸ್ಯರಾದ ಸತೀಶ್ ಶೆಟ್ಟಿ ಮೊಡಂಕಾಪು, ದಿವಾಕರ ಶೆಟ್ಟಿ ಕುಪ್ಪಿಲ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಉಮಾ ಲಿಂಗಪ್ಪ ತುಂಬೆ, ಪ್ರತಿಭಾ ಪಿ ಶೆಟ್ಟಿ ಪಲ್ಲಮಜಲು, ಲಲಿತಾ ಸುಂದರ್ ನೆತ್ತರಕೆರೆ, ಅಮಿತಾ ವಿಶ್ವನಾಥ್ ದಾಸರಕೋಡಿ,
ಯಶೋಧಾ ಜಾರಂದಗುಡ್ಡೆ, ವಾರಿಜಾ ಚಂದ್ರಿಗೆ, ರೇವತಿ ಮಾಡಂಗೆ, ಮಲ್ಲಿಕಾ ಡಿ ರೈ ಪಚ್ಚಿನಡ್ಕ, ದೇವಕಿ ರೈ, ಕವಿತಾ ಜಾರಂದಗುಡ್ಡೆ, ನಳಿನಿ ಜಾರಂದಗುಡ್ಡೆ, ಪುಷ್ಪ ಶೆಟ್ಟಿ ಪಾದೆ, ಶೋಭಾ ಸದಾನಂದ, ಚಂದ್ರಾವತಿ ದೇವಂದಬೆಟ್ಟು, ಸುಜಿತಾ ದೇವಂದಬೆಟ್ಟು, ಉಷಾ ಶಿಬರಾಯ ದೇವಂದಬೆಟ್ಟು, ವಸಂತಿ ರಾಮಚಂದ್ರ ನೆತ್ತರಕೆರೆ, ಮಾಲತಿ ತುಂಬೆ, ರೇಣುಕಾ ಪಂಬದಬೆಟ್ಟು, ಗೀತಾ ಮಾಡಂಗೆ, ಹರಿಣಾಕ್ಷಿ ಜಾರಂದಗುಡ್ಡೆ, ಶಾಲಿನಿ ಹರೀಶ್, ವಿಜೇತಲಕ್ಷ್ಮೀ, ಪ್ರಿಯಾ ಸತೀಶ್, ಅಕ್ಷತಾ, ಸವಿತಾ ಪ್ರಭಾಕರ್ ನೆತ್ತರಕೆರೆ, ವನಜಾ ಕಂಜತ್ತೂರು, ವಿಮಲಾಕ್ಷಿ ಆಯರಗುಡ್ಡೆ, ಸತೀಶ್ ಕುಲಾಲ್, ಯೋಗೀಶ್ ದರಿಬಾಗಿಲು ಮತ್ತಿತರರು ಉಪಸ್ಥಿತರಿದ್ದರು.














