Coastal Bulletin

ಬಂಟ್ವಾಳ :ಅಮ್ಮುಂಜೆ ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಬೆಂಜನಪದವು ಇದರ ಸಹಯೋಗದಲ್ಲಿ ಕೆನರಾ ಸಮೂಹ ಸಂಸ್ಥೆಗಳ ಸ್ಥಾಪಕರಾದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಜನ್ಮದಿನದ ಅಂಗವಾಗಿ ಕೆನರಾ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡದಿಂದ ಅಮ್ಮುಂಜೆ ಬೆಂಜನಪದವು ಹಾಗು ಕಲಾಯಿ ಪರಿಸರದ ಮನೆಗಳಿಗೆ ಭೇಟಿ ನೀಡಿ ಕೋವಿಡ್ ಲಸಿಕೆ ಪಡೆದವರ ಸಮೀಕ್ಷೆ ಮತ್ತು ಜಾಗೃತಿ ಅಭಿಯಾನವು ನವೆಂಬರ್ 19ಮತ್ತು 20ರಂದು ನಡೆಯಿತು.

ಈ ಅಭಿಯಾನದಲ್ಲಿ ಸುಮಾರು 60 ವಿದ್ಯಾರ್ಥಿಗಳ ತಂಡವು 6 ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಮನೆ ಮನೆಗೆ ಭೇಟಿ

ನೀಡಿ ಕೋವಿಡ್ ಲಸಿಕೆ ಪಡೆದವರ ಸಮೀಕ್ಷೆಯೊಂದಿಗೆ,ಲಸಿಕೆಯನ್ನು ಪಡೆಯದವರಿಗೆ ಅದರ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸಿದರು.

Leave a Comment