Coastal Bulletin

ಬಂಟ್ವಾಳ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ರಾಮ ಮಂದಿರ ಕಲ್ಲಡ್ಕ ಶಾಖೆ ಹಾಗೂ ನೇತಾಜಿ ಕಲ್ಲಡ್ಕ ಶಾಖೆಯ ಜಂಟಿ ಆಶ್ರಯದಲ್ಲಿ ಮಾತೃಧ್ಯಾನ, ಮಾತೃಪೂಜನ, ಮಾತೃವಂದನಾ, ಮಾತೃಭೋಜನ ಕಾರ್ಯಕ್ರಮವು ಕಲ್ಲಡ್ಕ ಶ್ರೀ ರಾಮ ಮಂದಿರದ ಮಾಧವ ಸಭಾಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲ್ಲಡ್ಕ ಶಾಖೆಯ ಪ್ರಮುಖ ಶಿಕ್ಷಕರಾದ ದಿನೇಶ್ ರಾಮನಗರ ಅವರು ವಹಿಸಿದ್ದರು. ಜಿಲ್ಲಾ ಸಂಸ್ಕಾರ ಪ್ರಮುಖರಾದ. ಲಕ್ಷ್ಮೀನಾರಾಯಣ ಅವರು ಮಾತೃಭೋಜನದ ಮಹತ್ವದ ಬಗ್ಗೆ ವಿಚಾರ ಮಂಡಿಸಿ, ದೇಶದ ಪರಂಪರೆಯಲ್ಲಿ ಮಾತೃಶಕ್ತಿ, ಮಾತೃಪ್ರೇಮಕ್ಕೆ ಇರುವಷ್ಟು ಪ್ರಭಾವ ಬೇರೆ ಯಾವುದಕ್ಕೂ ಇಲ್ಲ. ಅದು ದೇಶ, ಸಮಾಜ, ಕುಟುಂಬವನ್ನು ಸುಧೃಡಗೊಳಿಸುವ ದೈವಿಕ ಶಕ್ತಿಯನ್ನು ಹೊಂದಿದೆ ಎಂದರು. ತಾಯಿಯಾದವಳು ಎಂತಹ ಕಠಿಣ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯಿರುವುದು ಮಾತೃ ಪ್ರೀತಿಗೆ ಮಾತ್ರ. ಅವಳು ತನ್ನ ಮಕ್ಕಳು, ಪರಿವಾರಕ್ಕೋಸ್ಕರ ಯಾವ ತ್ಯಾಗಕ್ಕೂ ಸಿದ್ದಳಿರುತ್ತಾಳೆ. ಅದು ಈ ದೇಶದ ಮಣ್ಣಿನ ಗುಣ ಎಂದರು.

ಮುಖ್ಯ ಅತಿಥಿಯಾಗಿದ್ದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಡಾ. ಕಮಲ ಪ್ರಭಾಕರ್ ಭಟ್ ಕಲ್ಲಡ್ಕ ಅವರು ಮಾತನಾಡಿ. ಭಾರತ ಮಾತೆ ಮತ್ತು ತಾಯಿ ಎರಡೂ ಒಂದೆ. ಎರಡನ್ನೂ ನಾವೆಲ್ಲರೂ ಪೂಜಿಸ ಬೇಕಾದುದು ಧರ್ಮ, ಈ ಮಣ್ಣಿನ ಋಣ ಆ

ತಾಯಿಯ ಋಣವನ್ನು ಯಾವತ್ತೂ ಮರೆಯಬಾರದು, ಸಾತ್ವಿಕ ಮನಸ್ಸಿನಿಂದ ಸಂಸ್ಕಾರದ ನೆರಳಿನಲ್ಲಿ ಮಕ್ಕಳನ್ನು ಬೆಳೆಸುವುದು ಬಹಳ ಅಗತ್ಯ ಎಂದರು. ಜಿಲ್ಲಾ ಸಂಚಾಲಕರಾದ ಜಯರಾಮ್ ಹಾಗೂ ಹಿರಿಯ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಮಾತೃಧ್ಯಾನ, ಮಾತೃಪೂಜನ, ಮಾತೃವಂದನಾ ಮತ್ತು ಮಾತೃ ಭೋಜನ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಒಟ್ಟು 350 ಯೋಗ ಹಾಗೂ ಯೋಗೇತರ ಬಂಧುಗಳು ಸೇರಿದ್ದರು.  ಮುಖ್ಯ ಶಿಕ್ಷಕರಾದ ಮನೋಜ್ ಉಳ್ಳಾಲ ಯೋಗ ಬಂಧುಗಳ ಜೊತೆಯಲ್ಲಿ ದೀಪ ಬೆಳಗಿಸಿದರು, ನಾಗೇಶ ಕಲ್ಲಡ್ಕ ಅವರ ನೇತೃತ್ವದಲ್ಲಿ ಭಜನೆ ನಡೆಯಿತು. ಆನಂತರ ಎಲ್ಲಾ ಪ್ರಮುಖ ಯೋಗ ಶಿಕ್ಷಕರ ನೇತೃತ್ವದಲ್ಲಿ ಆಟೋಟಗಳು ನಡೆಯಿತು. ಆಮೇಲೆ ನಗುವೆ ಯೋಗ ಎಂಬ ಕಾರ್ಯಕ್ರಮವನ್ನು ಜಿಲ್ಲಾ ಸಂಸ್ಕಾರ ಪ್ರಮುಖರಾದ ಲಕ್ಷ್ಮೀ ನಾರಾಯಣರವರು ನಗುವಿನ ಲೋಕದಲ್ಲಿ ಎಲ್ಲರನ್ನೂ ತೇಲಾಡಿಸಿದರು.

 ಕುಮಾರಿ ಶ್ವೇತ ಕೆ, ಸ್ವಾಗತಿಸಿ, ಹರ್ಷಿತ, ವರದಿ ವಾಚಿಸಿದರು. ಶ್ವೇತ ಶೆಟ್ಟಿ, ವಂದಿಸಿದರು. ಅನಿತ ಕಾರ್ಯಕ್ರಮ ನಿರೂಪಿಸಿದರು.

Leave a Comment