ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ.ಟ್ರಸ್ಟ್( ರಿ) ಬಂಟ್ವಾಳ ಇದರ ತುಂಬೆ 'ಎ' ವಲಯ ಕಾರ್ಯಕ್ಷೇತ್ರ ವ್ಯಾಪ್ತಿಯ ತುಂಬೆ ಒಕ್ಕೂಟದ ಮಂಜೂಷಾ ಸ್ವಸಹಾಯ ಸಂಘದ 16 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರೀ ಶಾರದಾ ವಸಂತ್ ಪಂಬದಬೆಟ್ಟು ಇವರ ಮನೆಯಲ್ಲಿ ನಡೆಯಿತು.
ಒಕ್ಕೂಟದ ಅಧ್ಯಕ್ಷರಾದ ನವೀನ್ ಇವರ ಅಧ್ಯಕ್ಷತೆಯಲ್ಲಿ ವಹಿಸಿದ್ದರು .ಕಾರ್ಯಕ್ರಮವನ್ನು ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಉದ್ಘಾಟಿಸಿ, ಯೋಜನೆಯ ಹಿನ್ನೆಲೆ, ಪ್ರಯೋಜನಗಳು ಹಾಗೂ ವಿಶೇಷ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸೇವಾ
ಪ್ರತಿನಿಧಿ ಅನಿತಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಘದ ಎಲ್ಲಾ ಸದಸ್ಯರು ವಿವಿಧ ರೀತಿಯ ತಿಂಡಿ ತಿನಸುಗಳನ್ನು ತಯಾರಿಸಿ ತಂದು ಪರಸ್ಪರ ಹಂಚಿಕೊಂಡು ಸಂಭ್ರಮಿಸಿದರು. ಸಂಘದ ಸದಸ್ಯ ವಿಶಾಲಾಕ್ಷಿ ಸ್ವಾಗತಿಸಿ ,ನಾಗವೇಣಿ ವಂದಿಸಿದರು. ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು.
















