ಬಂಟ್ವಾಳ: ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನ , ಕುಮ್ಡೆಲು ಪುದು -ತುಂಬೆ ಇಲ್ಲಿ 1.25 ಕೋಟಿ ವೆಚ್ಚದಲ್ಲಿ ನೂತನವಾಗಿ ಪುನರ್ ನಿರ್ಮಾಗೊಂಡ ಶಿಲಾಮಯ ದೈವಾಲಯದಲ್ಲಿ ಶ್ರೀ ಕೋರ್ದಬ್ಬು ತನ್ನಿಮಾನಿಗ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮತ್ತು 75ನೇ ವರ್ಷಾವಧಿ ನೇಮೋತ್ಸವ ಎ.20 ರಿಂದ ಎ.25ರ ತನಕ ವಿಜ್ರಂಭಣೆಯಿಂದ ನಡೆಯಲಿದ್ದು ಅ ಪ್ರಯುಕ್ತ ಆಕರ್ಷಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಪರಂಗಿಪೇಟೆ ಶ್ರೀ ಅಂಜನೇಯ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಹೊರೆ ಕಾಣಿಕೆ ಮೆರವಣಿಗೆಗೆ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಗೆ ಚೆಂಡೆ, ವಾದ್ಯ, ಗೊಂಬೆ, ಕಲಶ ಹೊತ್ತ ಮಹಿಳೆಯರು ಭಗವಧ್ವಜದೊಂದಿಗೆ ನೂರಾರು ವಾಹನಗಳು ಮೆರಗು ನೀಡಿದವು.
ಈ ಸಂದರ್ಭದಲ್ಲಿ ಪ್ರಮುಖರಾದ ವೇದಮೂರ್ತಿ ಮುರಳಿ ಭಟ್ ಕಲ್ಲತಡಮೆ,ಭಾಸ್ಕರ ಚೌಟ ಕುಮ್ಡೆಲ್, ಐತಪ್ಪ ಆಳ್ವ ಸುಜೀರು ಗುತ್ತು,ಪ್ರಕಾಶ್ಚಂದ್ರ ರೈ ದೇವಸ್ಯ,ತಾರಾನಾಥ ಕೊಟ್ಟಾರಿ ತೇವು,ಉಮೇಶ್
ಸಾಲ್ಯಾನ್ ಬೆಂಜನಪದವು, ವೆಂಕಪ್ಪ ಗುರಿಕಾರ, ಉಮೇಶ್ ಶೆಟ್ಟಿ ಬರ್ಕೆ, ಚಂದ್ರಶೇಖರ್ ಗಂಭೀರ, ರವೀಂದ್ರ ಕಂಬಳಿ, ಗಣೇಶ್ ಸುವರ್ಣ, ಭುವನೇಶ್ ಪಚ್ಚಿನಡ್ಕ, ಸಂತೋಷ್ ಕೋಡ್ಮಣ್,ಪ್ರಕಾಶ್ ಶೆಟ್ಟಿ ಶ್ರೀ ಶೈಲ ತುಂಬೆ, ರಾಧಾಕೃಷ್ಣ ತಂತ್ರಿ ಬೆಂಜನಪದವು,ಭರತ್ ಕುಮ್ಡೆಲು,ಪದ್ಮನಾಭ ಶೆಟ್ಟಿ ಪುಂಚಮೆ,ಹರಿಕೃಷ್ಣ ಪಂಡಿತ್, ನವೀನ್ ಸುರಭಿ ಕೋಡ್ಮಾಣ್, ಮನೋಜ್ ಆಚಾರ್ಯ ನಾಣ್ಯ, ಜಯಶ್ರೀ ಕರ್ಕೇರ, ಶಾಂತ ಡಿ ಚೌಟ ಕುಮ್ಡೆಲ್, ವಿದ್ಯಾಶೇಖರ್, ಸೀತಾರಾಜೇಶ್ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು.














