Coastal Bulletin

ಮಂಗಳೂರು: ಮಂಗಳೂರಿನಲ್ಲಿ ವೈದ್ಯರು ಮತ್ತು ವೈದ್ಯರ ಗಾಂಜಾ ಲೋಕ ಪ್ರಕರಣ ಸಂಬಂಧ ಮಂಗಳೂರಿನ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ವೈದ್ಯರು ‌ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡಿದೆ. ಈ ಮೂಲಕ ನಮ್ಮ ‌ಸಂಸ್ಥೆ ಡ್ರಗ್ಸ್ ವಿಚಾರದಲ್ಲಿ ಪೊಲೀಸರ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದೆ.

ಡ್ರಗ್ ಕೇಸ್ ನಲ್ಲಿ ಸಿಕ್ಕಿ ಬಿದ್ದ ಇಬ್ಬರು ವೈದ್ಯರು ಹಾಗೂ ಏಳು ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇಬ್ಬರು ವೈದ್ಯರಿಗೆ

ಕೆಎಂಸಿ ಆಸ್ಪತ್ರೆಯಿಂದ ಗೇಟ್ ಪಾಸ್ ನೀಡಲಾಗಿದೆ. ಇಬ್ಬರು ವೈದ್ಯರನ್ನು ವಜಾ ಮಾಡಿ ಗುತ್ತಿಗೆ ರದ್ದುಪಡಿಸಿರುವ ಆಸ್ಪತ್ರೆ ಆಡಳಿತ ಮಂಡಳಿ ಸದ್ಯ ಕಠಿಣ ಕ್ರಮ ಕೈಗೊಂಡಿದೆ.

Leave a Comment