ಬಿ ಸಿ ರೋಡ್ :ತಾಲೂಕು ಪಿಂಚಣಿದಾರರ ಸಂಘದ 2025ನೇ ಸಾಲಿನ ಮಹಾಸಭೆ. ನಿವೃತ್ತರಾದರೂ ಸಮಾಜ ಸೇವೆಯ ಮೂಲಕ ಪ್ರವೃತ್ತರಾಗಿ: ಕೆ ಕೃಷ್ಣಕುಮಾರ ಪೂಂಜ.

Coastal Bulletin
ಬಿ ಸಿ ರೋಡ್ :ತಾಲೂಕು ಪಿಂಚಣಿದಾರರ ಸಂಘದ 2025ನೇ ಸಾಲಿನ ಮಹಾಸಭೆ. ನಿವೃತ್ತರಾದರೂ ಸಮಾಜ ಸೇವೆಯ ಮೂಲಕ ಪ್ರವೃತ್ತರಾಗಿ: ಕೆ ಕೃಷ್ಣಕುಮಾರ ಪೂಂಜ.

ಬಂಟ್ವಾಳ: ತಾಲೂಕು ಪಿಂಚಣಿದಾರರ ಸಂಘದ 2025ನೆ ಸಾಲಿನ ಮಹಾಸಭೆ ಲಯನ್ಸ್ ಸೇವಾ ಮಂದಿರದಲ್ಲಿ ಡಿ 17ರಂದು ಮಂಗಳವಾರ ನಡೆಯಿತು.

ಮಹಾಸಭೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣಕುಮಾರ ಪೂಂಜಾ ಮಾತನಾಡಿ, ನಾವು ನಿವೃತ್ತರಾದರೂ ಸಮಾಜ ಸೇವೆ ಮಾಡುವುದರ ಮೂಲಕ ಪ್ರವೃತ್ತರಾಗಬೇಕು. ನಾವು ಗಳಿಸಿದ ಒಂದಂಶ ಸಮಾಜಕ್ಕೆ ನೀಡಬೇಕು ಆ ಮೂಲಕ ಜೀವನ ಸಾರ್ಥಕ ಪಡಿಸಿದಾಗ ಮನ್ನಸ್ಸು ಉಲ್ಲಾಸಭರಿತ ವಾಗಿ ಶಾರೀರಿಕವಾಗಿ ಆರೋಗ್ಯವಾಗಿ ಇರಲು ಸಾಧ್ಯ ಎಂದು ಹೇಳುತ್ತಾ ಇದಕ್ಕೆ ನಾನೆ ಉದಾಹರಣೆ ಎಂದು ಹೇಳಿದರು.

ಇನ್ನೊರ್ವ ಮುಖ್ಯಅತಿಥಿ ನಿವೃತ್ತ ಪ್ರೊಫೆಸರ್ ಆಗಿರುವ ಡಾ.ಟಿ.ಕೆ ರವೀಂದ್ರನ್ ಮಾತನಾಡಿ ನಿವೃತ್ತರಾದ ಮೇಲೆ ನಿಂತ ನಿರಾಗದೆ ಇಂತಹ ಸಂಘಟನೆಯೊಂದಿಗೆ ಕೈ ಜೋಡಿಸಿ ಸಮಾಜ ಮುಖಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಬೇಕು. ಆಗ ನಮ್ಮ ಸಹಪಾಠಿಗಳೊಂದಿಗೆ ಬೆರೆಯುವುದರ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುವುದರ ಮೂಲಕ ಕೆಲವೊಂದು ನಿವೃತ್ತರ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಾಗ ಒತ್ತಡ ರಹಿತ ಜೀವನ ಸಾಧ್ಯ ಎಂದು ಹೇಳುತ್ತಾ ಈಗ ಕುಟುಂಬಗಳಲ್ಲಿ ಗಂಡಹೆಂಡತಿ ಮಾತ್ರ ಇರುತ್ತಾರೆ, ಮಕ್ಕಳು ದೂರದಲ್ಲಿ ಉದ್ಯೋಗದಲ್ಲಿದ್ದಾಗ ಸಹಜವಾಗಿಯೇ ಮಾನಸಿಕ ಖಿನ್ನತೆ ಉಂಟಾಗುತ್ತದೆ ಅದಕ್ಕೆಇಂತಹ ಸಭೆಗಳಲ್ಲಿ ಸ್ನೇಹಿತರೊಂದಿಗೆ ಜೊತೆಯಾದಾಗ ಮನಸ್ಸು ಪ್ರಫುಲ್ಲಿತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾದ ಲ. ಪಿ. ಲೋಕನಾಥ ಶೆಟ್ಟಿ ಎಂ ಜೆ ಎಫ್ ರವರು ಮಾತನಾಡಿ ಒಂದೇ ಕುಟುಂಬದವರಂತೆ ನಮ್ಮ ಸಂಘಟನೆಯಲ್ಲಿ ನಾವು ತೊಡ ಗಿಸಿಕೊಂಡು ಕಾರ್ಯಪ್ರವೃತ್ತ ರಾಗುತ್ತಿದ್ದೇವೆ. ಇದರಿಂದ ನಮಗೆ ಸಂತೋಷದೊಂದಿಗೆ ನೆಮ್ಮದಿ ಸಿಗಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಗತ ವರ್ಷದಲ್ಲಿ ನಿಧನರಾದ ಸಂಘದ ಹತ್ತು ಮಂದಿ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸದಸ್ಯರ ಪಟ್ಟಿಯನ್ನು ದೇವರಾಜ ಭಂಡಾರಿ ಓದಿ ಹೇಳಿದರು. ಸಂಘದ ಸದಸ್ಯರಲ್ಲಿ 75ವರ್ಷ ತುಂಬಿದ ಸದಸ್ಯರಾದ

ಪ್ರಾರಂಭ ದಲ್ಲಿ ವಿ ಶಂಕರ್ ಪ್ರಾರ್ಥನೆ ಮಾಡಿದರು.ಶ್ರೀ ಗೋಪಾಲ ರಾವ್ ಸಂಚಯಗಿರಿ, ಶ್ರೀ ಕೆ ಎಚ್. ವಸಂತ ಕುಮಾರ್, ಶ್ರೀ ಅಪ್ಪಯ್ಯ ಶೆಟ್ಟಿ, ಶ್ರೀ ನರಸಿಂಹ ಭಟ್, ಶ್ರೀ ವೆಂಕಟ್ರಮಣ ಭಟ್, ಕು. ಆನಂದಿ, ಶ್ರೀ ಟಿ ಕೆ ದಯಾನಂದ, ಶ್ರೀ ದಾಮೋದರ ಶೆಟ್ಟಿಗಾರ್, ಶ್ರೀಮತಿ ಲಕ್ಶ್ಮಿ ನೇರಳಕಟ್ಟೆ, ಶ್ರೀ ಪದ್ಮನಾಭ ರಾವ್ ಕೈಕುಂಜೆ, ಶ್ರೀ ಮಾಧವ ಮಾರ್ಲ ಮೊಡಂಕಾಪು, ಶ್ರೀ ಜಿ ಎ ಭಾವ ಆಮುಂಜೆ, ಶ್ರೀಮತಿ ವನಿಲಾ ಅಲೆತ್ತೂರು, ಶ್ರೀ ಗೋಪಾಲಕೃಷ್ಣ ರೈ ಬರಿಮಾರ್, ಶ್ರೀ ಗೋವರ್ಧನ್ ಶೆಣೈ, ಶ್ರೀಮತಿ ಲಕ್ಶ್ಮಿ ಅಮ್ಮ ಬೊಕ್ಕಸ ಇವರನ್ನು ಶಾಲು ಪಲಪುಷ್ಪ ಸ್ಮರಣಿಕೆ (ಪುಸ್ತಕ )ಹಾರ ನೀಡಿ ಸನ್ಮಾನಿಸಲಾಯಿತು. ಸನ್ಮಾನಿತರ ಹೆಸರನ್ನು ಶ್ರೀ ಮಹಾಬಲೇಶ್ವರ ಹೆಬ್ಬಾರ್, ಶ್ರೀ ಜಯಂತ ಶೆಟ್ಟಿ, ಶ್ರೀ ಸುಂದರ ಮೂಲ್ಯ ಹಾಗೂ ಸಂಘಟನಾ ಕಾರ್ಯದರ್ಶಿ ಶ್ರೀ ಸೋಮಪ್ಪ ಬಂಗೇರ, ಶ್ರೀ ಚಂದು ನಾಯ್ಕರವರು ಓದಿ ಹೇಳಿದರು.

ಸನ್ಮಾನಗೊಂಡವರಲ್ಲಿ ಶ್ರೀ ಜಿ ಎ ಬಾವ ಹಾಗೂ ಶ್ರೀಮತಿ ಲಕ್ಶ್ಮಿ ಅಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಶ್ರೀ ಅನಂತರಾಮ ಹೆರಳೆಯವರು ಸಭಿಕರ ಭಾಷಣ ಮಾಡಿ ಸಲಹೆ ನೀಡಿದರು. ಉಪಾಧ್ಯಕ್ಷರರಾದ ಶ್ರೀ ಸಂಕಪ್ಪ ಶೆಟ್ಟಿ ಯವರು ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀ ನಿಲೋಜಿ ರಾವ್ ವರದಿ ಮಂಡಿಸಿದರು. ಕೋಶಾಧಿಕಾರಿ ಶ್ರೀಮತಿ ಜಲಜಾಕ್ಸಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು. ಸಂಘದ ಜತೆಕಾ ರ್ಯದರ್ಶಿ ಶ್ರೀ ಜಯರಾಮ ಪೂಜಾರಿ ಧನ್ಯವಾದ ಸಲ್ಲಿಸಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ಮಧುಕರ ಮಲ್ಯ, ಸಂಘಟನಾ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಗಟ್ಟಿ ಸಹಕರಿಸಿದರು.ಶ್ರೀ ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಎಲ್ಲರಿಗೆ ಸಂಘದ ವತಿಯಿಂದ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Leave a Comment