ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ISO 9001:2015 ಮತ್ತು ISO 21001 ಪ್ರಮಾಣಪತ್ರ

Coastal Bulletin
ಬೆಂಜನಪದವು: ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ISO 9001:2015 ಮತ್ತು ISO 21001 ಪ್ರಮಾಣಪತ್ರ

ಬಂಟ್ವಾಳ : ಮಂಗಳೂರಿನ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಪ್ರಾಯೋಜಿತ ಬೆಂಜನ ಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿಗೆ ಪ್ರತಿಷ್ಠಿತ ISO 9001:2015 ಮತ್ತು ISO 21001 ಪ್ರಮಾಣಪತ್ರದ ಮಾನ್ಯತೆ ಲಭಿಸಿದೆ.

ಕಾಲೇಜಿನ ಮೂರು ಕೋರ್ಸುಗಳಿಗೆ 2022 ರಲ್ಲಿ ಎನ್.ಬಿ.ಎ ಮಾನ್ಯತೆ ,2023ರಲ್ಲಿ ನ್ಯಾಕ್ ಎಕ್ರೆಡಿಟೇಶನ್ ನಲ್ಲಿ ಎ ಗ್ರೇಡ್ ಮಾನ್ಯತೆ ಬಳಿಕ ಇದೀಗ ಕಾಲೇಜು ಮತ್ತೊಂದು ಮಹತ್ವದ ಸಾಧನೆ ದಾಖಲಿಸಿ ದಂತಾಗಿದೆ. ಈ ಮೂಲಕ ಸಂಸ್ಥೆಯ ಉನ್ನತ ಮಟ್ಟದ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗಳಿಗೆ ಗೌರವ ದೊರೆತಂತಾಗಿದೆ. 

ಇದೀಗ ಈ ಭಾಗದಲ್ಲಿ ಐ.ಎಸ್.ಒ. ಮಾನ್ಯತೆ ಪಡೆದ ಮೊದಲ ಇಂಜಿನಿಯರಿಂಗ್ ಕಾಲೇಜು ಎನ್ನುವ ಹಿರಿಮೆಗೆ ಕೆನರಾ ಇಂಜಿನಿಯರಿಂಗ್ ಕಾಲೇಜು ಪಾತ್ರವಾಗಿದೆ.ಈ ಮಾನ್ಯತೆ ವಿದ್ಯಾರ್ಥಿ ಕೇಂದ್ರಿತ ಗುಣಮಟ್ಟದ ಬೋಧನಾ ಕ್ರಮದಲ್ಲಿ ಕಾಲೇಜು ಹೊಂದಿರುವ ಬದ್ಧತೆಯನ್ನು ಗುರುತಿಸಿದೆ. ಈ ಮೂಲಕ ಕೆನರಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ

ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಯಾಗಿ ಗುರುತಿಸಲ್ಪಟ್ಟಿದೆ . ಇಂಟರ್ನ್ಯಾಷನಲ್ ಎಕ್ರೆಡಿಟೇಶನ್ ಟ್ರೆಡಿಶನ್ ಸರ್ವೀಸ್ (ಐ.ಎ.ಎಸ್.)ಮಾನ್ಯತೆ ಪಡೆದ ಗ್ಲೋಬಲ್ ಎಂ.ಸಿ.ಎಸ್ ಲಿಮಿಟೆಡ್ ಸಂಸ್ಥೆಯು ಪ್ರಮಾಣಪತ್ರವನ್ನು ನೀಡುತ್ತಿದ್ದು ಇದಕ್ಕೆ ಪೂರ್ವಭಾವಿಯಾಗಿ ಕಾಲೇಜನ್ನು ಸಂದರ್ಶಿಸಿ ಸಮಗ್ರ ಪರಿಶೀಲನೆ ಮತ್ತು ಅವಲೋಕನವನ್ನು ನಡೆಸಿದೆ.

ಕೆನರಾ ಇಂಜಿನಿಯರಿಂಗ್ ಕಾಲೇಜಿನ ಕಲಿಕಾ ಮತ್ತು ಬೋಧನಾ ಪ್ರಕ್ರಿಯೆಗಳು ರಾಷ್ಟ್ರೀಯ ಗುಣಮಟ್ಟದಲ್ಲಿರುವುದು ಈ ಮಾನ್ಯತೆಯಿಂದ ಖಚಿತಗೊಂಡಂತಾಗಿದೆ. ಕಾಲೇಜು ಕಲಿಕಾ ಮತ್ತು ಬೋಧನಾ ಗುಣಮಟ್ಟ ಘನತೆ ಹಾಗೂ ಪರಿಪೂರ್ಣತೆಯನ್ನು ಸಾಧಿಸುವಲ್ಲಿ ನಿರಂತರ ಬದ್ಧತೆಗೆ ಇದು ಸಾಕ್ಷಿಯಾಗಿದೆ .

ಈ ಮಾನ್ಯತೆಯಿಂದ ವಿದ್ಯಾರ್ಥಿಗಳಿಗೆ ಅತ್ಯುನ್ನತ ಗುಣಮಟ್ಟದ ಕಲಿಕಾ ಅನುಭವಗಳನ್ನು ಒದಗಿಸಲು ಸಾಧ್ಯವಾಗಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಔದ್ಯೋಗಿಕ ಭವಿಷ್ಯ ಉಜ್ವಲಗೊಳಿಸಿ ದಂತಾಗಿದೆ.

Leave a Comment