ಬಂಟ್ವಾಳ :ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕಳ್ಳಿಗೆ ನೆತ್ತರಕೆರೆ ಇದರ 2024-25ನೇ ಶೈಕ್ಷಣಿಕ ಸಾಲಿನ ಮೊದಲ ಪೋಷಕರ ಸಭೆಯು ಜೂ. 18ರಂದು ಮಂಗಳವಾರ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಾಧ್ಯಾಪಕ ಡಾ.ಅರುಣ್ ಉಳ್ಳಾಲ್ ಆಗಮಿಸಿ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನವೋದಯ ಮಿತ್ರಕಲಾ ವೃಂದ (ರಿ ) ನೆತ್ತರಕೆರೆ ಇದರ ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್, ಅಧ್ಯಕ್ಷ ಸಂತೋಷ್ ಕುಮಾರ್ ನೆತ್ತರಕೆರೆ ಉಪಸ್ಥಿತರಿದ್ದರು.
ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷ ದಾಮೋದರ ನೆತ್ತರಕೆರೆ ಪ್ರಸ್ತಾವಿಕವಾಗಿ ಮಾತನಾಡಿದರು, ಶಿಕ್ಷಕಿಯರಾದ ಜಸಿಂತಾ ರೋಡ್ರಿಗಸ್ ಹಾಗೂ ಮರಿಯಾ ಸೆಲಿನ್
ಶೈಕ್ಷಣಿಕ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಸಿಲ್ವಿಯಾ ಬ್ರೇಗ್ಸ್ ಸ್ವಾಗತಿಸಿ, ಶಿಕ್ಷಕ ಹನಮಂತಪ್ಪ ಗುತ್ತಲ ವಂದಿಸಿ, ಶಿಕ್ಷಕ ಅವಿನಾಶ್ ಡ್ಯಾನಿಯಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ತುಳುನಾಡಿನ ಪಾರಂಪರಿಕ ಆಹಾರ ಪದಾರ್ಥ ಉಪ್ಪಡ್ ಪಚ್ಚಿಲ್ ಶೇಖರಣೆ :
ಪೋಷಕರ ಸಭೆಯ ನಂತರ ಎಲ್ಲಾ ಪೋಷಕರು ಒಟ್ಟು ಸೇರಿ ಶ್ರದ್ದೆಯಿಂದ ವಿದ್ಯಾರ್ಥಿಗಳ ಮನೆಗಳಿಂದ ತಂದ ಹಲಸಿನ ಕಾಯಿಯ ಹಲಸಿನ ಸೊಳೆಯನ್ನು ಬಿಡಿ ಬಿಡಿಯಾಗಿ ಬಿಡಿಸಿ ಉಪ್ಪು ಹಾಕಿ (ಉಪ್ಪಡ್ ಪಚ್ಚಿಲ್ )ಶಾಲಾ ಮಕ್ಕಳ ಮದ್ಯಾಹ್ನದ ಬಿಸಿಯೂಟಕ್ಕಾಗಿ ಶೇಖರಿಸಿ ಇಡಲಾಯಿತು.










