ಬೆಂಗಳೂರರು :ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ "ರಾಜ್ಯ ಮಿನಿ ಒಲಿಂಪಿಕ್ಸ್ 2022"ನಲ್ಲಿ ದ ಕ ಜಿಲ್ಲೆಯಿಂದ ಭಾಗವಹಿಸಿದ ಗೀತೆಶ್ ನೆತ್ತರಕೆರೆ ಇವರು ಜೂಡೋ ಸ್ಪರ್ಧೆಯ 35 ಕೆ ಜಿ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿರುತ್ತಾರೆ. ಇವರು ಪೊಳಲಿಯ ಶ್ರೀ ರಾಮಕೃಷ್ಣ ತಪೋವನದ ವಿದ್ಯಾರ್ಥಿ ಹಾಗೂ ಕಳ್ಳಿಗೆ ಗ್ರಾ.ಪಂ.ಉಪಾಧ್ಯಕ್ಷ ದಾಮೋದರ ನೆತ್ತರಕೆರೆ ಇವರ ಪುತ್ರ.
ಅದೇ ರೀತಿ ಶ್ರೀ ರಾಮ ಕೃಷ್ಣ ತಪೋವನ ಪೊಳಲಿ ಇಲ್ಲಿನ ಜುಡೋ ತರಗತಿಯ ವಿದ್ಯಾರ್ಥಿಗಳಾದ, ಸಂದೀಪ್, 40ಕೆ ಜಿ ವಿಭಾಗದಲ್ಲಿ ದ್ವಿತೀಯ,ತನ್ಮಯ ಪಿ ಶೆಟ್ಟಿ 66ಕೆ ಜಿ ವಿಭಾಗದಲ್ಲಿ ದ್ವಿತೀಯ, ಹಂಸಿಕಾ ನೆತ್ತರಕೆರೆ 32 ಕೆ ಜಿ ಹುಡುಗಿಯರ ವಿಭಾಗದಲ್ಲಿ ದ್ವಿತೀಯ, ಸಾತ್ವಿಕ ಪೊಳಲಿ 32ಕೆ ಜಿ
ಹುಡುಗಿಯರ ವಿಭಾಗದಲ್ಲಿ ದ್ವಿತೀಯ, ಯಶ್ವಿನಿ ಜಾರಂದಗುಡ್ಡೆ 57ಕೆ ಜಿ ಹುಡುಗಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಇವರೆಲ್ಲ ಶ್ರೀ ರಾಮ ಕೃಷ್ಣ ತಪೋವನ ಪೊಳಲಿ ಇಲ್ಲಿಯ ರಾಜೇಶ್ ಶ್ರೀಯಾನ್ ರವರ ಶಿಷ್ಯರು, ವೆನಿಲ್ಲಾ ಮಣಿಕಂಠ , ಅಶ್ಮಿತಾ ರೈ ಕಲ್ಲಡ್ಕ , ರಾಕೇಶ್ ಮಂಗಳೂರು, ತರಬೇತುದಾರರಾಗಿ ಶ್ರಮವಹಿಸಿದರು














