ಮಂಗಳೂರು :ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಊರ್ವ ಸ್ಟೋರ್ ಇಲ್ಲಿ ನಡೆದ "ನನ್ನ ದಾರಿಯಲ್ಲಿ ನನ್ನ ಪಯಣ" ಕಾರ್ಯಕ್ರಮದ ಮೂರನೇ ಆವೃತ್ತಿಯಲ್ಲಿ ಇತ್ತೀಚೆಗೆ ತೆರೆ ಕಂಡು ದಾಖಲೆ ನಿರ್ಮಿಸಿದ ಕೆಜಿಎಫ್ ಸಿನಿಮಾದಲ್ಲಿ ಬಾಂಬೆ ಶೆಟ್ಟಿಯಾಗಿ ನಟಿಸಿದ ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು ಇವರು ತಮ್ಮ ವೈಯಕ್ತಿಕ ಬದುಕಿನ ಸಿಹಿ ಕಹಿಗಳನ್ನು ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಹಂಚಿಕೊಂಡರು.
ರಂಗಭೂಮಿ ಕಲಾವಿದರಾಗಿ ತಮ್ಮ ನಟನೆಯ ಪ್ರಯಾಣವನ್ನು ಆರಂಭಿಸಿ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಆ ದಿನಗಳು, ಮುಂತಾದ ಸಿನಿಮಾದಲ್ಲಿ ಇವರ ನೈಜ ಅಭಿನಯವನ್ನು ಮೆಚ್ಚಿ ಕೆಜಿಎಫ್ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆಯಿತು ಎಂದು ತನ್ನ ಬದುಕಿನ ಯಾನದ ಅನುಭವ ವನ್ನು ಹಂಚಿಕೊಂಡರು.ಇವರ
ಅನುಭವದ ಮಾತುಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿತ್ತು.
ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಎಸ್ ವಿ ಕನ್ಸುಲ್ಟೆಂಟ್ ನ,ಜಿ ಯೋಗೀಶ್ ಪೈ ಭಾಗವಹಿಸಿದ್ದರು. ಕಾಲೇಜಿನ ಅಧ್ಯಕ್ಷರಾದ ಡಾ ರಾಘವೇಂದ್ರ ಹೊಳ್ಳರು ನಿರೂಪಕರಾಗಿದ್ದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಮಾಲಿನಿ ಹೆಬ್ಬಾರ್, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿ ಭುವನ್ ಶೆಟ್ಟಿ ಸ್ವಾಗತಿಸಿ ವಂದಿಸಿದರು.














