Coastal Bulletin

ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಸರ್ಕಾರಿ ಬಸ್ ಡಿಪೋ ಹಿಂಬದಿ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಇಸ್ಪೀಟು ಅಡ್ಡೆಗೆ ಎಎಸ್ಪಿ ಶಿವಾಂಶು ರಜಪೂತ್ ನೇತೃತ್ವದ ಪೊಲೀಸರ ತಂಡ ಗುರುವಾರ ಸಂಜೆ ದಾಳಿ ನಡೆಸಿ ರೂ.8300 ನಗದು ಸಹಿತ ಎಂಟು ಮಂದಿಯನ್ನು ಬಂಧಿಸಿದ್ದಾರೆ.

 ಸ್ಥಳೀಯ ನಾರ್ಲಪಡೀಲು ನಿವಾಸಿ ಜಾಕಿರ್ ಅಹ್ಮದ್, ಮಾರಿಪಳ್ಳ ನಿವಾಸಿ ಶಂಶುದ್ದೀನ್, ಜುಮಾದಿಗುಡ್ಡೆ ನಿವಾಸಿ ಧೀರಜ್ ಕುಲಾಲ್, ತಾಳಿಪಡ್ಪು ನಿವಾಸಿ ಅಬ್ದುಲ್ ಅಜೀಝ್, ಅಮ್ಮೆಮಾರು ನಿವಾಸಿ ಮೊಹಮ್ಮದ್ ಸಿರಾಜ್,

ಬೆಳುವಾಯಿ ನಿವಾಸಿ ಅಬೂಬಕ್ಕರ್, ಅಮ್ಮೆಮಾರು ನಿವಾಸಿ ಮೊಹಮ್ಮದ್, ಬಡಕಬೈಲು ನಿವಾಸಿ ಅಬ್ದುಲ್ ಹಮೀದ್ ಬಂಧಿತರು. ಇವರಿಂದ ಎರಡು ಬೈಕ್, ಟರ್ಪಲು ಮತ್ತಿತರ ಸಾಮಾಗ್ರಿ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Comment