Coastal Bulletin

ಬಂಟ್ವಾಳ :ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಗುರುವಾರ ಆರಂಭಗೊಂಡ ಬಿಸಿಎ ಕೋರ್ಸ್ ಗೆ ಕಾಲೇಜಿನ ಸಂಸ್ಥಾಪಕ ಡಾ.ಕೆ.ಪ್ರಭಾಕರ ಭಟ್ ಚಾಲನೆ ನೀಡಿದರು.

ಶಿಕ್ಷಣದಲ್ಲಿ ಕೇವಲ ಮಾಹಿತಿಗೆ ಮಾತ್ರ ಸೀಮಿತವಾಗದೆ ಧರ್ಮ ಮತ್ತು ಸಂಸ್ಕೃತಿ ಜೊತೆಗೆ ರಾಷ್ಟ್ರೀಯತೆಯೂ ಇರಬೇಕು ಎಂದು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕೆ.ಪ್ರಭಾಕರ ಭಟ್ ಹೇಳಿದ್ದಾರೆ. ಇಲ್ಲಿನ ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಗುರುವಾರ ಆರಂಭಗೊಂಡ ಬಿಸಿಎ ಕೋರ್ಸ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಪ್ರೊ.ಕರುಣಾಕರ ಎ. ಕೋಟೆಕಾರ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿರುವ ಶಿಕ್ಷಣ

ವ್ಯವಸ್ಥೆ ಅತ್ಯುತ್ತಮವಾಗಿದೆ ಎಂದರು. ಬೆಂಗಳೂರಿನ ಆಕಾಶ್ ಆಸ್ಪತ್ರೆಯ ಡಾ. ಸುನಿಲ್ ಹೆಗಡೆ, ಮುಖ್ಯ ಲೆಕ್ಕಾಧಿಕಾರಿ ವಿನಾಯಕ ರಾವ್ ಬಿ.ಎಸ್., ಉಡುಪಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗಡೆ, ಶಾಲಾ ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ಎನ್., ಡಾ. ಕಮಲಾ ಪ್ರಭಾಕರ ಭಟ್, ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಇದ್ದರು. ವಿದ್ಯಾರ್ಥಿನಿ ಹರ್ಷಿತಾ ಎಸ್. ಸ್ವಾಗತಿಸಿ, ಹರ್ಷಿತಾ ವಂದಿಸಿದರು. ಹಿತೇಶ್ ಕಾರ್ಯಕ್ರಮ ನಿರೂಪಿಸಿದರು.

Leave a Comment